

ಕೋಲಾರ: ಗೌತಮ ಬುದ್ಧ ಏಷ್ಯಾದ ಬೆಳಕಾಗಿದ್ದು, ಬುದ್ಧನನ್ನು ಒಪ್ಪಿಕೊಳ್ಳದ ದೇಶಗಳು ಇಕ್ಕಟ್ಟಿನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದರೆ. ಅಪ್ಪಿಕೊಂಡ ದೇಶಗಳು ಪ್ರಗತಿ ಪಥದಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದು. ಭಾರತಕ್ಕೂ ಬುದ್ಧನ ಪ್ರೀತಿಯೇ ಶಸವಾಗುವುದು ಅತ್ಯಗತ್ಯವಾಗಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಬಣ್ಣಿಸಿದರು.
ನಗರದ ನಚಿಕೇತ ನಿಲಯದ ಆವರಣದ ಬುದ್ಧ ಮಂದಿರದಲ್ಲಿ ಭಾನುವಾರ ಪೊ.ಅರಿವು ಶಿವಪ್ಪ ರಚಿತ ಬುದ್ಧ ಗುರುವಿನ ಶಿಷ್ಯರು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ಜಗತ್ತಿನ ಎಲ್ಲ ಸವಾಲುಗಳಿಗೆ ಬುದ್ಧ ಉತ್ತರವಾಗಿ ನಿಲ್ಲುತ್ತಾನೆ. ಅವರ ಚಿಂತನೆಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಬುದ್ಧನ ವೈಚಾರಿಕ ವಿಚಾರಗಳನ್ನು ನಮ್ಮೊಳಗೆ ನಾವೇ ಮನನ ಮಾಡಿಕೊಂಡು ನಮ್ಮೊಳಗಿನ ಬೆಳಕನ್ನು ನಾವೇ ನೋಡಿಕೊಂಡು ನಾಳೆಗೆ ಬೆಳಕಾಗಲು ಸಾಧ್ಯ. ಸಾಧನೆಯ ಹಾದಿಯಲ್ಲಿ ಸಾಗಿದವರು ಸದಾ ಜೀವಂತವಾಗಿರುತ್ತಾರೆ ಎಂಬುದಕ್ಕೆ ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಸಾಯಾಗಿದ್ದಾರೆ, ಶಿವಪ್ಪರ ಬುದ್ಧ ಲೋಕದ ಪ್ರಯಾಣ ಜೀವಪರವಾಗಿ ಜನರನ್ನು ಸಾಗಿಸಲು ಸಹಕಾರಿಯಾಗಲಿದೆ ಎಂದರು.
ಬುದ್ಧ ಗುರುವಿನ ಶಿಷ್ಯರು ಕೃತಿ ಬರೆದಿರುವ ಅರಿವು ಶಿವಪ್ಪ ಅಸ್ಪೃಶ್ಯತೆ ಹೋರಾಟ, ಗೃಹ ಪ್ರವೇಶ ಅಭಿಯಾನ, ವಿಧವೆ ವಿಧುರರ ಮದುವೆಯಂತ ಸಾಮಾಜಿಕ ಕಳಕಳಿಯ ಚಟುವಟಿಕೆಗಳನ್ನು ನಡೆಸುತ್ತಲೇ ಅಂತಿಮವಾಗಿ ಬುದ್ಧನಿಗೆ ಶರಣಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ, ದಸಂಸ ಹಿರಿಯ ಹೋರಾಟ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ರೈತ ಸಂದ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ, ಗ್ರಂಥಾಲಯದ ಮೇಲ್ವಿಚಾರಕಿ ಮಂಜುಳ ಕೊಂಡರಾಜನಹಳ್ಳಿ ಹಾಜರಿದ್ದರು.
ಬುದ್ಧ ಸಂದೇಶ ಚರಿತ್ರೆಯ ಅತ್ಯುತ್ತಮ ಭಾಗ
ಬುದ್ಧ ಅವರ ಶಿಷ್ಯರು ಮನುಕುಲದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಸಿದ್ದಾರೆ. ಅವರ ಜೀವನ ಮತ್ತು ಸಂದೇಶ ದೇಶದ ಚರಿತ್ರೆಯ ಅತ್ಯುತ್ತಮ ಭಾಗವಾಗಿದೆ. ಆದ್ದರಿಂದ ಅವರನ್ನು ಪರಿಚಯಿಸುವುದು ಪುಣ್ಯದ ಕೆಲಸವೆಂದು ಭಾವಿಸಿ ಕೃತಿ ರಚಿಸಿದ್ದೇನೆ ಎಂದು ಕೃತಿ ರಚನಕಾರ ಪೊ.ಅರಿವು ಶಿವಪ್ಪ ತಿಳಿಸಿದರು. ಬುದ್ಧ ಒಂದು ದಶಕದ ಕಾಲ ಶ್ರಮಪಟ್ಟು ಕಂಡುಕೊಂಡ ಾನದ ಹಾದಿಯನ್ನು ತನ್ನ ಶಿಷ್ಯರಿಗೆ ತೋರಿಸಿಕೊಟ್ಟಿದ್ದರಿಂದ ಶಿಷ್ಯರು ಕೇವಲ ಅಲ್ಪಕಾಲದಲ್ಲಿಯೇ ಾನವಂತರಾಗಲು ಸಾಧ್ಯವಾಯಿತು. ಕೇವಲ ಪುರುಷರಷ್ಟೇ ಅಲ್ಲ ಮಹಿಳೆಯರಿಗೂ ಬುದ್ಧ ಅವರಹಂತರನ್ನಾಗಿಸಿದ ಹೀಗಾಗಿ ಬುದ್ಧನ ಪ್ರಮುಖ 11 ಮಂದಿ ಶಿಷ್ಯರನ್ನು ತಮ್ಮ ಕೃತಿಯಮೂಲಕ ಪರಿಚಯಿಸುತ್ತಿರುವುದಾಗಿ ವಿವರಿಸಿದರು.