

Fake currency: 82,000 ಮೌಲ್ಯದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಮುಂಬೈನ ವಿಶೇಷ ಎನ್ಐಎ ನ್ಯಾಯಾಲಯವು ವ್ಯಕ್ತಿಯೊಬ್ಬನನ್ನು ಐದು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಸಿಮ್ ಅಲಿಯಾಸ್ ವಾಸಿಮ್ ಸಲೀಂ ಶೇಖ್ ಆರೋಪಿ ಎಂದು ತಿಳಿದುಬಂದಿದೆ. ಇನ್ನು ಈತ ಸುಮಾರು 5 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ನಂತರ ತಪ್ಪೊಪ್ಪಿಕೊಂಡಿದ್ದು, ನ್ಯಾಯಾಲಯ ಈತನಿಗೆ 10,000 ರೂ. ದಂಡದೊಂದಿಗೆ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: https://www.vijayavani.net/cricket-coach-arrested-for-sexually-assaulting-13-year-old-girl-trainee
ಮೊದಲು ಶೇಖ್ ಪ್ರಕರಣವನ್ನು ಮುಂಬ್ರಾ ಪೊಲೀಸರು ನಿರ್ವಹಿಸುತ್ತಿದ್ದರು ನಂತರ ಆತನನ್ನು ಎನ್ಐಎ ಗೆ ವರ್ಗಾಯಿಸಲಾಯಿತು. ಕೋಲ್ಕತ್ತಾದಲ್ಲಿ ಮೊಬೈಲ್ ಕಳ್ಳತ ಮಾಡಿ, ಜೈಲಿನಲ್ಲಿದ್ದಾಗ ಸಹ ಖೈದಿ ಇಸಾಖ್ ಖಾನ್, ಶೇಖ್ ಅವರಿಗೆ ನಕಲಿ ಕರೆನ್ಸಿ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವಂತೆ ಮನವೊಲಿಸಿದ್ದರು ಎಂದು ತನಿಖೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 2019 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಶೇಖ್ ಅವರನ್ನು ಸಂಪರ್ಕಿಸಿ ಕರ್ನಾಟಕದ ಸಹಚರರಿಂದ ನಕಲಿ ನೋಟುಗಳ ಸರಕನ್ನು ಸಂಗ್ರಹಿಸಲು ಕೇಳಿಕೊಂಡರು. ನಂತರ ಅವರು ಅಲ್ಲಿಗೆ ಪ್ರಯಾಣಿಸಿ, 82,000 ರೂ.ಮೌಲ್ಯದ 500 ರೂಗಳ ನಕಲಿ ನೋಟುಗಳನ್ನು ತೆಗೆದುಕೊಂಡು, ಮುಂಬ್ರಾದ ಮನೆಗೆ ಮರಳಿದ್ದು, ಮಾಹಿತಿ ತಿಳಿದ ಪೊಲೀಸರು ಶೇಕ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಸರ್ವೇ ಸೆಟ್ಲ್ಮೆಂಟ್ಗೆ ಜಂಟಿ ಸರ್ವೇ ನಡೆಸಲಿ
ಶೇಖ್ ಈ ರೀತಿಯ ಅಪರಾಧ ಎಸಗಿದ್ದು, ಇದೇ ಮೊದಲು ಮತ್ತು ಖಾನ್ ಆತನನ್ನು ಅಪರಾಧಕ್ಕೆ ಮನವೊಲಿಸಿದ್ದರು ಎಂದು ನ್ಯಾಯಾಲಯ ಗಮನಿಸಿದ್ದು, ಆತನ ಶಿಕ್ಷೆಯನ್ನು ಈ ಹಿಂದೆ ಜೈಲಿನಲ್ಲಿ ಕಳೆದ ಸಮಯಕ್ಕೆ ಸೀಮಿತಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)