'ಟ್ರಂಪ್ ವಿರುದ್ಧ ಮಾತನಾಡಲು ಸಾಧ್ಯವಾಗಲಿಲ್ಲ'; ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ| Mallikarjun Kharge

kharge
Published on

ಭುವನೇಶ್ವರ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು (11) ವಾಗ್ದಾಳಿ ನಡೆಸಿದ್ದಾರೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಳಿಕ ಭಾರತ-ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ್ದೇವೆ ಎಂದು ಟ್ರಂಪ್​ ಹೇಳಿಕೆ ನೀಡಿದರು. ಇನ್ನೂ ಈ ಬಗ್ಗೆ ಪ್ರಧಾನಿ ಮೋದಿಯವರು ಟ್ರಂಪ್ಅನ್ನು ಪ್ರಶ್ನಿಸದೆ ಸುಮ್ಮನಾದರು ಎಂದು ಆರೋಪಿಸಿದ್ದಾರೆ.

ಒಡಿಶಾದ ಭುವನೇಶ್ವರ ನಗರದಲ್ಲಿ ನಡೆದ ಪಕ್ಷದ 'ಸಂವಿಧಾನ ಬಚಾವೋ ಸಮಾವೇಶ'ವನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಭಾರತ-ಪಾಕಿಸ್ತಾನ ಯುದ್ಧ ನಡೆಯುತ್ತಿರುವಾಗ ಯುದ್ಧವನ್ನು ನಾನು ಕೊನೆಗೊಳಿಸಿದೆ ಎಂದು ಡೊನಾಲ್ಡ್ ಟ್ರಂಪ್ 16 ಬಾರಿ ಹೇಳಿಕೆ ನೀಡಿದರು. ಆದರೂ ಸಹ ಮೋದಿ ಅವರಿಗೆ ಪ್ರತಿಕ್ರಿಯಿಸಲಿಲ್ಲ ಏಕೆ? ಏಕೆಂದರೆ ಅವರಿಗೆ ಟ್ರಂಪ್ ವಿರುದ್ಧ ಮಾತನಾಡುವ ಧೈರ್ಯವಿರಲಿಲ್ಲ ಎಂದು ಭುವನೇಶ್ವರದಲ್ಲಿ ನಡೆದ ರ್‍ಯಾಲಿಯಲ್ಲಿ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.

(ಏಜೆನ್ಸೀಸ್)

ಕಳೆದ ತಿಂಗಳು ಭಾರತ ಹಾಗೂ ಪಾಕಿಸ್ತಾನ ಮಿಲಿಟರಿ ಘರ್ಷಣೆಯ ಬಳಿಕ ಮೊದಲ 35 ನಿಮಿಷಗಳ ಸಂಭಾಷಣೆಯಲ್ಲಿ, ಪ್ರಧಾನಿ ಮೋದಿ ಅವರು ಟ್ರಂಪ್ ಅವರ ಹೇಳಿಕೆಯನ್ನು ಗಮನಿಸಿದರು. ಅವರು ಎರಡೂ ದೇಶಗಳಿಗೆ ವ್ಯಾಪಾರ ಅಡ್ಡಿಪಡಿಸುವ ಬೆದರಿಕೆ ಹಾಕುವ ಮೂಲಕ "ಕದನ ವಿರಾಮ"ವನ್ನು ಒತ್ತಾಯಿಸಿದರು ಮತ್ತು ಕಾಶ್ಮೀರ ವಿಷಯದಲ್ಲಿ ಅವರ ನಡುವೆ ಮಧ್ಯಸ್ಥಿಕೆ ವಹಿಸಲು ಸಹ ಮುಂದಾದರು. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ವಿರುದ್ಧ ಆಪರೇಷನ್ ಸಿಂಧೂರ್ ಬಗ್ಗೆ ಟ್ರಂಪ್ ಅವರಿಗೆ ವಿವರಿಸಿದ ಪ್ರಧಾನಿ ಮೋದಿ, ಭಾರತ ಈಗ ಭಯೋತ್ಪಾದನೆಯನ್ನು ಯುದ್ಧದ ಕೃತ್ಯವೆಂದು ನೋಡುತ್ತದೆ, ಈ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net