ಭ್ರಷ್ಟಾಚಾರ ಪ್ರಕರಣ: ಮುಖ್ಯಮಂತ್ರಿಯಿಂದ ವಜಾಗೊಂಡ ಬೆನ್ನಲ್ಲೇ ಬಂಧನಕ್ಕೊಳಗಾದ ಪಂಜಾಬ್​ ಆರೋಗ್ಯ ಸಚಿವ

Panjab Cm
Published on

ಚಂಡಿಘಢ: ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಗ್ಯ ಸಚಿವನನ್ನು ಮುಖ್ಯಮಂತ್ರಿ ಭಗವಂತ ಮಾನ್​ ವಜಾಗೊಳಿಸಿದ ಬೆನ್ನಲ್ಲೇ ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್​ನ ಆರೋಗ್ಯ ಸಚಿವರಾಗಿದ್ದ ವಿಜಯ್​ ಸಿಂಗ್ಲಾ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ವಜಾಗೊಳಿಸಿದ್ದರು.

ಪ್ರತಿ ಟೆಂಡರ್​​ ಪಡೆಯುವಾಗಲೂ ಶೇ.1 ರಷ್ಟು ಕಮಿಷನ್​​ ಸಚಿವರಿಗೆ ಹೋಗಲೇ ಬೇಕಿತ್ತು. ಈ ಆರೋಪ ಕೇಳಿಬಂದದ್ದರಿಂದ ಸಿಎಂ ವಜಾಗೊಳಿಸಿದ್ದರು. ಇನ್ನು ಪಂಜಾಬ್​​ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಸಚಿವರನ್ನು ವಶಕ್ಕೆ ಪಡೆದಿದ್ದಾರೆ.

10 ದಿನಗಳ ಹಿಂದೆ ಮುಖ್ಯಮಂತ್ರಿಗೆ ಈ ಬಗ್ಗೆ ದೂರು ನೀಡಲಾಗಿತ್ತು. ದೇಶದಲ್ಲೇ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಂಡ 2ನೇ ಪ್ರಕರಣ ಇದಾಗಿದೆ. 2015ರಲ್ಲಿ ಅರವಿಂದ್ ಕೇಜ್ರಿವಾಲ್​ ಅವರು ಸಹ ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವನೊಬ್ಬನನ್ನು ವಜಾಗೊಳಿಸಿದ್ದರು.

ಮುಖ್ಯಮಂತ್ರಿಗೆ ದೂರು ಬಂದ ಹಿನ್ನಲೆಯಲ್ಲಿ ಪ್ರತ್ಯೇಕವಾಗಿ ತಂಡ ರಚಿಸಿ ಸಚಿವರ ಭ್ರಷ್ಟಾಚಾರವನ್ನು ಬಯಲಿಗೆಳೆಯಲಾಗಿತ್ತು. ಇದೀಗ ಅವರ ವಿರುದ್ಧ ಭ್ರಷ್ಟಾಚಾರ ನಡೆಸಿರುವುದು ನಿಖರ ಮಾಹಿತಿ ತಿಳಿದಿದ್ದರಿಂದ ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿ ಬಂಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net