

ಬೆಂಗಳೂರು: 2025ರ ವಿತರಿಸಲಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1,2 ಮತ್ತು 3ರ ಉತ್ತೀರ್ಣ ಅಂಕಪಟ್ಟಿಯಲ್ಲಿ ಶಾಲಾ ಹಂತದಲ್ಲಿ ಅಭ್ಯರ್ಥಿಯ ಹೆಸರು, ತಂದೆ-ತಾಯಿ ಹೆಸರು, ಜನ್ಮ ದಿನಾಂಕ, ಲಿಂಗ ಮಾಧ್ಯಮ ಮಾಹಿತಿಗಳು ತಪ್ಪಾಗಿದ್ದಲ್ಲಿ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ ತಿದ್ದುಪಡಿ ಮಾಡಿಕೊಳ್ಳುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ಈಗಾಗಲೇ ಅಂಕಪಟ್ಟಿಗಳನ್ನು ಮಂಡಳಿಯು ಬಿಇಒ ಕಚೇರಿಗೆ ಕಳುಹಿಸಲಾಗಿದೆ. ಶಾಲೆಯಲ್ಲಿ ಸಂಬಂಧಿಸಿದ ಶಾಲಾ ಮುಖ್ಯಶಿಕ್ಷಕರು ಹಸ್ತಾಂತರಿಸಿ ವಿದ್ಯಾರ್ಥಿಗಳಿಗೆ ತಕ್ಷಣ ವಿತರಿಸಲು ಸೂಚಿಸಲಾಗಿದೆ.
ತಪ್ಪಾಗಿದ್ದಲ್ಲಿ ಅ.20ರೊಳಗೆ ಬದಲಾವಣೆ ಮಾಡಿಕೊಂಡು ಪರಿಷ್ಕೃತ ಅಂಕಪಟ್ಟಿಯನ್ನು ಪಡೆಯಬಹುದು. ತಿದ್ದುಪಡಿಗೆ 200 ರೂ. ಶುಲ್ಕ ನಿಗದಿ ಮಾಡಿದ್ದು, ಕಡ್ಡಾಯವಾಗಿ ಶಾಲಾ ಮುಖ್ಯ ಶಿಕ್ಷಕರೇ ಮಂಡಳಿಯ ನ್‌ಟೆ ಚಲನ್ ಮೂಲಕ ಪಾವತಿಸುವಂತೆ ಸೂಚಿಸಲಾಗಿದೆ.