

ಆಸ್ಟ್ರೇಲಿಯಾ ಪೂರ್ವಭಾಗದ ಸಿಡ್ನಿ, ಮೆಲ್ಬೋರ್ನ್ಗಳಲ್ಲಿ ಕರೊನಾ ವೇಗವಾಗಿ ಹರಡುತ್ತಿದೆ. ಇಲ್ಲಿ 19 ಜನ ಮೃತಪಟ್ಟಿದ್ದು, 4500 ಕರೊನಾ ಸೋಂಕಿತರಿದ್ದಾರೆ.
1,60,000 ಜನಕ್ಕೆ ವೈರಾಣು ಪರೀಕ್ಷೆ ನಡೆಸಲಾಗಿದೆ. ಸೋಂಕಿತರನ್ನು ಸ್ವಯಂ ನಿರ್ಬಂಧಕ್ಕೆ ಒಳಪಡಿಸಲಾಗುತ್ತಿದೆ. ಪರ್ತ್ನ ದೊಡ್ಡ ಆಸ್ಪತ್ರೆಗಳಲ್ಲಿ ವೈರಾಣು ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದೇಶದಲ್ಲೀಗ ರೆಸ್ಟೋರೆಂಟ್, ಬಾರ್ ಮುಂತಾದ ಸಾರ್ವಜನಿಕ ಕೇಂದ್ರಗಳನ್ನು ಮುಚ್ಚಲಾಗಿದೆ.
ಪರ್ತ್ ಸೇರಿ ಹಲವೆಡೆ ಶಾಲೆಗಳು ತೆರೆದಿದ್ದರೆ, ಮೆಲ್ಬೋರ್ನ್ ಮತ್ತು ಕ್ಯಾಂಬೆರಾ ನಗರಗಳಲ್ಲಿ ಮುಚ್ಚಲಾಗಿದೆ. ಆಸ್ಟ್ರೇಲಿಯಾ ಸರ್ಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಸಮರೋಪಾದಿ ಕಾರ್ಯನಿರ್ವಹಿಸುತ್ತಿವೆ. ಪ್ರಧಾನಿ ಸ್ಕಾಟ್ ಮೊರಿಸೋನ್, ಪಶ್ಚಿಮ ಆಸ್ಟ್ರೇಲಿಯಾ ಮುಖ್ಯಮಂತ್ರಿ ಮಾರ್ಕ್ ಮ್ಯಾಕ್ ಗಾವನ್ ಸೇರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ರಾಷ್ಟ್ರೀಯ ಕ್ಯಾಬಿನೆಟ್ ರಚಿಸಿ ಸಂವಹನ ಸುಲಲಿತಗೊಳಿಸಲಾಗಿದೆ.
ಈಗಾಗಲೆ ಆಸ್ಟ್ರೇಲಿಯಾ ಗಡಿ ಮುಚ್ಚಲಾಗಿದೆ. ತೀವ್ರ ಆರ್ಥಿಕ ಹಿಂಜರಿತ ತಪ್ಪಿಸಲು ಹಾಗೂ ಉದ್ಯೋಗ ಕಳೆದುಕೊಂಡವರ ಸಹಾಯಕ್ಕಾಗಿ 169 ಬಿಲಿಯನ್ ಡಾಲರ್ ಮೊತ್ತದ ಪ್ಯಾಕೇಜ್ ಘೊಷಿಸಲಾಗಿದೆ.
| ಡಾ.ಜಗದೀಶ ಜಂಬೋಟಿ ಕನ್ಸಲ್ಟೆಂಟ್ ನೆಫೊರೊಲಾಜಿಸ್ಟ್, ಫಿಯಾನಾ ಸ್ಟನ್ಲಿ ಹಾಸ್ಪಿಟಲ್ ಆಸ್ಟ್ರೇಲಿಯಾ