

ನವದೆಹಲಿ: ಕೋವಿಡ್- 19 ಎರಡನೇ ಅಲೆ ಅಬ್ಬರ ತಗ್ಗಿತೆಂದು ನಿಟ್ಟುಸಿರು ಬಿಡುವಷ್ಟರಲ್ಲೇ 3ನೇ ಅಲೆಯ ಆತಂಕ ಶುರುವಾಗಿದೆ. ಮುಂದಿನ 2&4 ವಾರದೊಳಗೆ ಮಹಾರಾಷ್ಟ್ರ ಅಥವಾ ಮುಂಬೈ ನಗರಕ್ಕೆ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆಯೆಂದು ಮಹಾರಾಷ್ಟ್ರ ಕೋವಿಡ್ ಕಾರ್ಯಪಡೆ ಗಂಭೀರ ಎಚ್ಚರಿಕೆ ನೀಡಿದೆ. ಮೂರನೇ ಅಲೆಗೆ ಮುನ್ನೆಚ್ಚರಿಕೆ ವಹಿಸುವ ಕುರಿತು ಸಿಎಂ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಯಪಡೆಯ ಸದಸ್ಯರು ಈ ಬಗ್ಗೆ ವರದಿ ನೀಡಿದ್ದಾರೆ.
ಮೊದಲ ಎರಡು ಅಲೆಗಳಿಂದ ತಪ್ಪಿಸಿಕೊಂಡಿದ್ದ ಅಥವಾ ಅತ್ಯಧಿಕ ಪ್ರಮಾಣದಲ್ಲಿ ಪ್ರತಿಕಾಯಗಳನ್ನು ಕಳೆದುಕೊಂಡಿರುವ ವರ್ಗದಲ್ಲಿ 3ನೇ ಅಲೆ ಪರಿಣಾಮ ಹೆಚ್ಚಿರಲಿದೆ ಎಂದು ತಜ್ಞರು ಹೇಳಿದ್ದಾರೆ.
ಮಕ್ಕಳು ನಿರಾತಂಕ: ಇದುವರೆಗೆ ಸೋಂಕಿಗೆ ತುತ್ತಾಗದ ಕೆಳ&ಮಧ್ಯಮ ವರ್ಗದ ಕ್ಲಸ್ಟರ್ಗಳಲ್ಲಿ ಮಕ್ಕಳಿಗೆ ಅಪಾಯವಾಗದು ಎಂದು ಕಾರ್ಯಪಡೆ ಹೇಳಿದೆ.
ವರದಿಯಲ್ಲೇನಿದೆ?
ಕಾರಣ ಏನು?
* ಕೆಲವು ದಿನಗಳಿಂದ ಹೆಚ್ಚಿದ ಜನರ ಓಡಾಟ
* ಜನರ ಗುಂಪುಗೂಡು ವಿಕೆಗೆ ಬೀಳದ ಕಡಿವಾಣ
* ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು
* ಲಾಕ್ಡೌನ್ ರ್ನಿಬಂಧಗಳನ್ನು ತೆರವುಗೊಳಿಸಿರುವುದು