

ಜಗತ್ತಿನಾದ್ಯಂತ ಸುಮಾರು 3000 ಜನರ ಪ್ರಾಣವನ್ನೇ ಕಸಿದಿರುವ ಕೊರನಾ ವೈರಸ್ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಲೇ ಇದೆ. ಸದ್ಯ 90,000 ಜನರು ಸೋಂಕು ಪೀಡಿತರಾಗಿದ್ದಾರೆ. ಸದ್ಯ ಈ ವೈರಸ್ ಬಗ್ಗೆಯೇ ಜನರು ಆತಂಕದಿಂದ ಗಮನಹರಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ವೈರಸ್ (coronavirus) ಎಂಬುದು ಟ್ರೆಂಡ್ ಆಗಿದೆ.
ಆದರೆ ಕೆಲವು ಅಶ್ಲೀಲ ವೆಬ್ಸೈಟ್ಗಳು (ಪೋರ್ನ್ ವೆಬ್ಸೈಟ್)ಗಳು ಕೊರೊನಾ ವೈರಸ್ ಹೆಸರಿನಲ್ಲಿ ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿವೆ. ಮಾಸ್ಕ್, ಹಜ್ಮತ್ ಸೂಟ್ಗಳನ್ನು ಧರಿಸಿಕೊಂಡು ಸೆಕ್ಸ್ನಲ್ಲಿ ತೊಡಗಿರುವ ವಿಡಿಯೋಗಳನ್ನು ಹರಿಬಿಡುತ್ತಿವೆ.
ಇದು ತೀರ ಅತಿಯೆನಿಸಿದರೂ ಸತ್ಯ. ಪ್ರಮುಖ ಅಶ್ಲೀಲ್ ವೆಬ್ಸೈಟ್ಗಳಲ್ಲಿ ಕೊರೊನಾ ವೈರಸ್ ಹೆಸರಿನ ಅಶ್ಲೀಲ ವಿಡಿಯೋಗಳು ಸಿಕ್ಕಾಪಟೆ ಟ್ರೆಂಡ್ ಆಗುತ್ತಿವೆ. ಅದನ್ನು ನೋಡಿ ಹಲವರು ಇದೇ ಹೆಸರು ಕೊಟ್ಟು ಸೆಕ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಅಲ್ಲದೆ, ಡೆಸರ್ಟೆಡ್ ವುಹಾನ್, ಟಿಎಸ್ಎ ಏಜೆಂಟ್ ಡಿಟೇನ್ ವುಮನ್ ಸಸ್ಪೆಕ್ಟೆಡ್ ಆಫ್ ಕೊರೊನಾ ವೈರಸ್ ಎಂಬಿತ್ಯಾದಿ ಹೆಡ್ಲೈನ್ಗಳನ್ನು ಹೊಂದಿರುವ ಅಶ್ಲೀಲ್ ವಿಡಿಯೋಗಳು ತುಂಬುತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನೀಲಿಚಿತ್ರ ತಾರೆಯೋರ್ವರು, COVID-19 ಥೀಮ್ನ ಅಶ್ಲೀಲ ವಿಡಿಯೋಗಳತ್ತ ಜನರು ಆಕರ್ಷಿತರಾಗುತ್ತಾರೆ ಎಂದು ಭಾವಿಸುತ್ತೇನೆ. ತಮ್ಮ ನೆರಳನ್ನು ನೋಡಿ ಭಯ ಬೀಳುವ ಜನರು ಹಾರರ್ ಚಲನಚಿತ್ರಗಳನ್ನು ನೋಡುವುದು ಹೇಗೆ ಹೆಚ್ಚೋ, ಹಾಗೇ ಸದ್ಯ ಕೊರೊನಾ ವೈರಸ್ ಭೀತಿಯಲ್ಲಿರುವ ಜನರೂ ಕೂಡ ಅದೇ ಹೆಸರಿನ ಅಶ್ಲೀಲ ವಿಡಿಯೋಗಳತ್ತ ಆಕರ್ಷಿತರಾಗುತ್ತಾರೆ ಎನ್ನಿಸುತ್ತದೆ ಎಂದಿದ್ದಾರೆ.
ಹಾಗೇ ಇಂತಹ ವಿಡಿಯೋಗಳನ್ನು ಮಾಡಿದ್ದು ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಹೊರತಾಗಿ ಕೊರೊನಾ ಪೀಡಿತರಿಗೆ ಅವಮಾನ ಮಾಡಲಾಗಲಿ, ಈ ಸನ್ನಿವೇಶವನ್ನು ಅಣುಕಿಸುವ ಸಲುವಾಗಲಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊರೊನಾ ವೈರಸ್ ಥೀಮ್ನ ಸುಮಾರು 112 ಅಶ್ಲೀಲ ವಿಡಿಯೋಗಳು ಪೋರ್ನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿವೆ ಎನ್ನಲಾಗಿದೆ. (ಏಜೆನ್ಸೀಸ್)