ಎಲ್ಲಿಗೆ ಹೋಗಿದ್ದೆ...ಯಾಕೆ ಸುಮ್ಮನೆ ಓಡಾಡ್ತೀಯ ಎಂದು ಅಡ್ಡಗಟ್ಟಿ ಲಾಠಿ ತೋರಿಸಿದ ಪೊಲೀಸರಿಗೆ ಖಾಲಿ ಚೊಂಬು ತೋರಿಸಿದ ಯುವಕ...

Coronavirus 27
Published on

ರಾಯಚೂರು: ಮಾರ್ಚ್ 24ರಿಂದ ಲಾಕ್​ಡೌನ್​ ಘೋಷಣೆಯಾಗಿದ್ದರೂ ಜನರು ಓಡಾಟವನ್ನು ಬಿಟ್ಟಿಲ್ಲ. ಅಗತ್ಯ ಕೆಲಸವಿದೆ ಎಂದು ಹೋಗುವವರು ಒಂದೆಡೆಯಾದರೆ, ಇನ್ನೊಂದಷ್ಟು ಮಂದಿ ಸುಮ್ಮನೆ ಬೈಕ್​ನಲ್ಲಿ ತಿರುಗಾಡುತ್ತಿದ್ದಾರೆ. ಅಂಥವರ ಮೇಲೆ ಪೊಲೀಸರು ಲಾಠಿಚಾರ್ಜ್​ ಕೂಡ ಮಾಡುತ್ತಿದ್ದಾರೆ.

ಇಂದು ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ಕೂಡ ಹಲವರು ರಸ್ತೆಗಿಳಿದಿದ್ದರು. ಅವರಿಗೆಲ್ಲ ಕರ್ತವ್ಯ ನಿರತ ಪೊಲೀಸರು ಲಾಠಿ ಬೀಸಿ, ವಾರ್ನ್​ ಮಾಡಿ ಮನೆಗೆ ಕಳಿಸಿದ್ದಾರೆ. ಅವರೂ ಕೂಡ ವಿವಿಧ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಬೈಕ್​ನಲ್ಲಿ ಬಂದ ಯುವಕನೋರ್ವನನ್ನು ಅಡ್ಡಗಟ್ಟಿ, ಎಲ್ಲಿಗೆ ಹೋಗಿದ್ದೆ, ಯಾಕೆ ತಿರುಗುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಆತ ಖಾಲಿ ಚೊಂಬು ತೋರಿಸಿ, ಬಯಲು ಬಹಿರ್ದೆಸೆಗೆ ಹೋಗಿದ್ದೆ ಎಂದು ಉತ್ತರಿಸಿದ್ದಾನೆ. ಆದರೂ ಬಿಡದೆ, ಆತನಿಗೂ ಲಾಠಿ ರುಚಿ ತೋರಿಸಿ ಕಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net