ಮೇ 3ಕ್ಕೆ ಮುಗಿಯೋದಿಲ್ಲ ಲಾಕ್​ಡೌನ್​; ಇನ್ನೂ ಎರಡು ವಾರ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ ಗೃಹ ಸಚಿವಾಲಯ

Lockdownnn
Published on

ನವದೆಹಲಿ: ಕರೊನಾ ವೈರಸ್​ ಸೋಂಕಿತರ ಸಂಖ್ಯೆ ಭಾರತದಲ್ಲಿ 35,365ಕ್ಕೆ ಏರಿದ್ದು, ಸಾವಿನ ಸಂಖ್ಯೆ 1,152ಕ್ಕೇರಿದೆ. ಕಳೆದ 24 ಗಂಟೆಯಲ್ಲಿ 1993 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಮೇ 3ರಂದು ಎರಡನೇ ಹಂತದ ಲಾಕ್​ಡೌನ್ ಅವಧಿ ಮುಗಿಯಬೇಕಿತ್ತು. ಆದರೆ ದಿನೇದಿನೆ ಭಾರತದಲ್ಲಿ ಕರೊನಾ ಪ್ರಸರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್​ನ್ನು ಮೇ 17ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ. ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net