

ತುಮಕೂರು: ಎಷ್ಟೇ ಕಾದರೂ ಬಾರ್ಗಳು ಓಪನ್ ಆಗುತ್ತಿಲ್ಲ. ಮದ್ಯಪ್ರಿಯರಿಗೆ ಇದು ತೀವ್ರ ಬೇಸರ ಮೂಡಿಸಿದೆ. ಕುಡಿಯುವ ಆಸೆಯನ್ನು ತಡೆಯಲಾಗದ ಕೆಲವರು ಬಾರ್ಗಳಿಗೆ ಕನ್ನಹಾಕುತ್ತಿದ್ದಾರೆ.
ಈಗಾಗಲೇ ಅನೇಕ ಕಡೆಗಳಿಂದ ಬಾರ್ ಬಾಗಿಲು ಒಡೆದು, ಮದ್ಯ ಕಳವು ಮಾಡಿದ್ದರ ವರದಿಯಾಗಿದೆ. ಇದೀಗ ತುಮಕೂರು ಮತ್ತು ದಾವಣಗೆರೆಯಲ್ಲೂ ಭರ್ಜರಿ ಮೌಲ್ಯದ ಮದ್ಯ ಕಳವಾಗಿದೆ.
ತುಮಕೂರಿನ ಮಧುಗಿರಿ ತಾಲೂಕಿನ ಬೆಡತ್ತೂರು ಗ್ರಾಮದಲ್ಲಿ ಎಂಎಸ್ಐಎಲ್ ಬಾರ್ನಲ್ಲಿ ಕಳ್ಳತನವಾಗಿದೆ. ಶೆಟರ್ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಮಧ್ಯವನ್ನು ಎಗರಿಸಿದ್ದಾರೆ. ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಗೇ ದಾವಣಗೆರೆಯಲ್ಲೂ ಕೂಡ ಸುಮಾರು 70 ಸಾವಿರ ರೂ.ಮೌಲ್ಯದ ಮದ್ಯ ಕಳವಾಗಿದೆ. ಹೊಸಕೆರೆ ಗ್ರಾಮದ ಸತ್ಯಮ್ಮ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿದ್ದ 180 ಎಂಎಲ್‌ನ 48 ಬಾಟಲ್‌ಗಳ 29 ಬಾಕ್ಸ್, 12 ಬಾಕ್ಸ್ ಬೀಯರ್ನ್ನು ಕುಡುಕರು ಎಗರಿಸಿದ್ದಾರೆ.
ಬಾರ್ ಕಟ್ಟಡದ ಗೋಡೆ ಕೊರೆದು ಮದ್ಯವನ್ನು ಕಳವು ಮಾಡಲಾಗಿದೆ. ಈ ಬಾರ್ ಆ್ಯಂಡ್ ರೆಸ್ಟೋರೆಮಟ್ ಮಹದವೇಪ್ಪ ಎಂಬುವರಿಗೆ ಸೇರಿದ್ದು. ಕರೊನಾ ಹಿನ್ನೆಲೆಯಲ್ಲಿ 15 ದಿನಗಳಿಂದ ಲಾಕ್ಡೌನ್ ಆಗಿತ್ತು. ಆದರೆ ಮಂಗಳವಾರ ರಾತ್ರಿ ಕಳವು ಆಗಿದೆ.
ಘಟನಾ ಸ್ಥಳಕ್ಕೆ ಪಿಎಸ್ಐ ಉಮೇಶ್ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)