

ಕಲಬುರಗಿ: ದುಬೈನಿಂದ ಕಲಬುರಗಿಗೆ ಆಗಮಿಸಿದ್ದ 75ವರ್ಷದ ವೃದ್ಧ ಮಹಮದ್ ಹುಸೇನ್ ಸಿದ್ಧಕಿ ಶಂಕಿತ ಕರೊನಾ ವೈರಸ್ನಿಂದ ಹೈದರಾಬಾದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಅವರ ಮೃತದೇಹವನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ತಂದಿಡಲಾಗಿತ್ತು. ಆದರೆ ಈಗ ಆ ಸರ್ಕಾರಿ ಆಸ್ಪತ್ರೆ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಹಮ್ಮದ್ ಸಿದ್ಧಕಿ ಅವರ ಶವವನ್ನು ಆಸ್ಪತ್ರೆಯ ಶವಾಗಾರದ ಒಳಗೆ ತೆಗೆದುಕೊಂಡು ಹೋಗುವ ಪೂರ್ವದಲ್ಲಿ ಒಂದು ವೀಲ್ ಚೇರ್ ಮೇಲೆ ಪ್ಲಾಸ್ಟಿಕ್ನಲ್ಲಿ ಸುತ್ತಿ ಸುಮಾರು ಸಮಯಗಳ ಹೊರಗೇ ಇಡಲಾಗಿತ್ತು. ಅದು ಶಂಕಿತ ಕರೊನಾದಿಂದ ಮೃತಪಟ್ಟವನ ಮೃತದೇಹ ಎಂದು ತಿಳಿಯದ ಸಾರ್ವಜನಿಕರು ಅದರ ಆಸುಪಾಸೇ ಓಡಾಡಿಕೊಂಡು ಇದ್ದರು.
ಈಗ ಮಾಧ್ಯಮಗಳಲ್ಲೆಲ್ಲ ಸುದ್ದಿಯಾಗುತ್ತಿದ್ದಂತೆ ಅದು ಶಂಕಿತ ಕರೊನಾ ಸೋಂಕಿತನ ಶವ ಎಂದು ತಿಳಿದ ಜನ ಆಸ್ಪತ್ರೆ ವಿರುದ್ಧ ಕಿಡಿಕಾರುತ್ತಿದ್ದಾರೆ. ಆಸ್ಪತ್ರೆಯ ಬೇಜವಾಬ್ದಾರಿತನವನ್ನು ದೂಷಿಸುತ್ತಿದ್ದಾರೆ.