ಕರೊನಾ ವೈರಸ್​ ಕೇಂದ್ರ ಬಿಂದು ವುಹಾನ್​ನಲ್ಲಿ ಚಟುವಟಿಕೆ ಆರಂಭ

Wuhan
Published on

ಕರೊನಾ ವೈರಸ್​ನ ಕೇಂದ್ರ ಬಿಂದು ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಗರದಲ್ಲಿ ಎರಡೂವರೆ ತಿಂಗಳ ಬಳಿಕ ಮತ್ತೆ ಚಟುವಟಿಕೆ ಆರಂಭವಾಗಿದೆ.

ಜನವರಿ ಕಡೆಯ ವಾರದಲ್ಲಿ ವುಹಾನ್ ನಗರದಲ್ಲಿ ಘೋಷಿಸಲಾಗಿದ್ದ ಲಾಕ್​ಡೌನ್ ತೆರವುಗೊಳಿಸಲಾಗಿದ್ದು, ಆರ್ಥಿಕ ಚಟುವಟಿಕೆ ಮತ್ತೆ ಆರಂಭಗೊಂಡಿರುವುದರಿಂದ ಅಲ್ಲಿನ 1.1 ಕೋಟಿ ಜನರು ಈಗ ತುಸು ನಿರಾಳರಾಗಿದ್ದಾರೆ.

ಲಾಕ್​ಡೌನ್ ತೆರವುಗೊಂಡಿದ್ದರೂ ಕೆಲವು ನಿರ್ಬಂಧಗಳು ಮುಂದುವರಿದಿವೆ. ಶಾಲಾ- ಕಾಲೇಜುಗಳು ಬಂದ್ ಆಗಿವೆ. ಸಂಚಾರದ ಮಿತಿ ಮುಂದುವರಿದಿದೆ. ಸಾರ್ವಜನಿಕ ಸಾರಿಗೆ ಆರಂಭಗೊಂಡಿದ್ದರೂ ಜನರ ಸಂಚಾರ ಕಡಿಮೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net