

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಕರೊನಾ ಸೋಂಕಿನ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಅಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿದಾಟಿದೆ.
ಇಂದು ಒಂದೇ ದಿನ 1379 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,00,823ಕ್ಕೆ ಏರಿದೆ. ಮೃತರ ಒಟ್ಟು ಸಂಖ್ಯೆ 3115 ಆಗಿದೆ.
ದೆಹಲಿಯಲ್ಲಿ ಕರೊನಾ ಟೆಸ್ಟ್, ಚಿಕಿತ್ಸೆಗಾಗಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಪ್ಲಾಸ್ಮಾ ಬ್ಯಾಂಕ್ಗಳನ್ನು ತೆರೆಯಲಾಗಿದ್ದು, ಕರೊನಾದಿಂದ ಚೇತರಿಸಿಕೊಂಡವರು ಪ್ಲಾಸ್ಮಾ ದಾನ ಮಾಡಿ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮನವಿ ಮಾಡಿದ್ದಾರೆ.
ಹಾಗೇ ಮನೆಮನೆಗೆ ತೆರಳಿ ಕೊವಿಡ್-19 ಸಮೀಕ್ಷೆ ನಡೆಸಲಾಗುತ್ತಿದೆ. ಹೆಲ್ಪ್ಲೈನ್ಗಳನ್ನು ತೆರೆಯಲಾಗಿದೆ. ದೆಹಲಿಯಲ್ಲಿ ಕರೊನಾದಿಂದ ಗುಣಮುಖರಾಗುತ್ತಿರುವವರ ಪ್ರಮಾಣವೂ ಶೇ.70ಕ್ಕೆ ಏರಿದ ಎಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ.(ಏಜೆನ್ಸೀಸ್)