ರಾಮಮಂದಿರ ನಿರ್ಮಾಣವಾದ ತಕ್ಷಣ ಕರೊನಾ ನಾಶವಾಗುತ್ತದೆ ಎಂದ ಬಿಜೆಪಿ ಎಂಪಿ

BJP MP
Published on

ದೌಸಾ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದ್ದಂತೆ ಕರೊನಾ ವೈರಸ್ ಕೂಡ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಬಿಜೆಪಿ ಸಂಸದೆಯೋರ್ವರು ಹೇಳಿದ್ದಾರೆ.

ರಾಜಸ್ಥಾನದ ದೌಸಾ ಲೋಕಸಭಾ ಕ್ಷೇತ್ರದ ಸದಸ್ಯೆ ಜಸ್ಕೌರ್ ಮೀನಾ ಅವರು, ಕರೊನಾ ನಿಯಂತ್ರಣಕ್ಕೆ ರಾಮಮಂದಿರ ನಿರ್ಮಾಣವೇ ಪರಿಹಾರ ಎಂದಿದ್ದಾರೆ. ಇದನ್ನೂ ಓದಿ: ದೇಶದಲ್ಲಿ 15 ಲಕ್ಷದ ಗಡಿದಾಟಿದ ಕರೊನಾ ಸೋಂಕಿತರ ಸಂಖ್ಯೆ; ಚೇತರಿಕೆ ಪ್ರಮಾಣದಲ್ಲಿ ಏರಿಕೆ

ನಾವು ಆಧ್ಯಾತ್ಮಿಕ ಶಕ್ತಿಯನ್ನು ಬಲವಾಗಿ ನಂಬುತ್ತೇವೆ. ಅದರ ಅನುಯಾಯಿಗಳು. ಬೇಕಿದ್ದರೆ ನೋಡುತ್ತಿರಿ, ರಾಮಮಂದಿರ ಕಟ್ಟಿದ ಕೆಲವೇ ದಿನಗಳಲ್ಲಿ ಕರೊನಾ ವೈರಸ್​ ಕೂಡ ನಾಶವಾಗುತ್ತದೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ ಕೂಡ ಇದೇ ವಾದವನ್ನು ಮುಂದಿಟ್ಟಿದ್ದಾರೆ. ಇವರು, ರಾಮಮಂದಿರ ನಿರ್ಮಾಣ ಕಾರ್ಯ ಶುರುವಾಗುತ್ತಿದ್ದಂತೆ ಕರೊನಾ ನಾಶ ಖಂಡಿತ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net