

ಇಷ್ಟು ದಿನ ತುಂಬಾ ಬಿಜಿ ಇದ್ದ ಕಾರಣ, ಸ್ನೇಹಿತರು, ಮನೆಯವರು, ಬಂಧುಬಳಗಕ್ಕೆ ವೇಳೆ ಕೊಡಲು ಆಗುತ್ತಿರಲಿಲ್ಲ. ಈ ಸಮಯವನ್ನು ಅದಕ್ಕಾಗಿ ಉಪಯೋಗಿಸಿಕೊಳ್ಳಿ. ನಿಮ್ಮ ಸ್ನೇಹಿತರು, ಸಂಬಂಧಿಕರ ಜತೆ ಮೊಬೈಲ್ ಮೂಲಕ ಮಾತನಾಡಿ ಕುಶಲೋಪರಿ ನಡೆಸಿ.
ಮನೆಯಲ್ಲಿಯೇ ಇರಬೇಕಾದ ಸಂದರ್ಭ ಇರುವ ಕಾರಣ ಈ ಸಮಯದಲ್ಲಿ ಬೇಸರ, ಒತ್ತಡ, ಗೊಂದಲ, ಸಿಟ್ಟು, ಕೋಪ, ತಾಪ ಎಲ್ಲವೂ ಸಹಜವೇ.
ಮನೆಯಲ್ಲಿಯೇ ಇರುವ ವೇಳೆ ಆರೋಗ್ಯಕರ ಲೈಫ್‌ಸ್ಟೈಲ್ ರೂಢಿಸಿಕೊಳ್ಳಿ, ಊಟ-ಉಪಾಹಾರ, ಡಯಟ್, ನಿದ್ರೆ, ವ್ಯಾಯಾಮ, ನಿಮ್ಮ ಪ್ರಿಯ ಕುಟುಂಬದ ಜತೆ ಟೈಂಪಾಸ್ ಇವೆಲ್ಲವನ್ನೂ ಮಾಡಿ.
ನಿಮ್ಮ ಒತ್ತಡವನ್ನು ಹೋಗಲಾಡಿಸಲು ಯಾವುದೇ ಕಾರಣಕ್ಕೂ ಧೂಮಪಾನ, ಮದ್ಯಪಾನದ ಮೊರೆ ಹೋಗಬೇಡಿ. ತುಂಬಾ ಆಯಾಸ ಅಥವಾ ಖಿನ್ನತೆ ಕಾಡುತ್ತಿದ್ದರೆ, ಕೌನ್ಸೆಲರ್ ಜತೆ ಸಮಾಲೋಚನೆ ನಡೆಸಿ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಅವರಲ್ಲಿ ಮಾತುಕತೆ ನಡೆಸಿ.
ನಿಮಗೆ ಯಾವುದೇ ರೀತಿಯಲ್ಲಿ ತೊಂದರೆ, ಒತ್ತಡ ಎನಿಸುತ್ತಿದ್ದರೆ, ವಿಶ್ವ ಆರೋಗ್ಯ ಸಂಸ್ಥೆ ಅಥವಾ ಇನ್ನಾವುದೇ ಉತ್ತಮ ಹಾಗೂ ವಿಶ್ವಾಸಾರ್ಹ ಎನಿಸಿರುವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ಗಳನ್ನು ತೆರೆದು ಅದನ್ನು ಓದಿ.
ನಿಮ್ಮ ಮೂಡನ್ನು ಸರಿಯಾಗಿ ಇಡುವಂಥ, ನಿಮ್ಮ ಇಷ್ಟದ ವಿಷಯಗಳ ಬಗ್ಗೆ ಟೀ.ವಿ ಅಥವಾ ಇನ್ನಿತರ ಮಾಧ್ಯಮಗಳ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸಿ.
ನೀವು ಹಿಂದೆ ಯಾವುದರಲ್ಲಿ ನಿಪುಣರಾಗಿದ್ದೀರೋ ಅವೆಲ್ಲವನ್ನೂ ಕೆಲಸದ ಒತ್ತಡದಲ್ಲಿ ಮರೆತಿರಲು ಸಾಕು. ಅವುಗಳನ್ನೊಮ್ಮೆ ನೆನಪಿಸಿಕೊಂಡು ಅದನ್ನು ಮುಂದುವರೆಸಿ, ಸಂತಸದಿಂದ ಇರಿ.