

ಮುಂಬೈ: ಮಾರಕ ಕರೊನಾ ವೈರಸ್ ಸೋಂಕಿಗೆ ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇಂದು 40 ವರ್ಷದ ಮಹಿಳೆ ಬಲಿಯಾಗಿದ್ದಾರೆ.
ಮುಂಬೈನಲ್ಲಿ ಸೋಂಕಿಗೆ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ರಾಷ್ಟ್ರದಲ್ಲಿ ಮೃತಪಟ್ಟರ ಸಂಖ್ಯೆ 27 ಮಂದಿ.
ಸೋಂಕಿನಿಂದ ಬಳಲುತ್ತಿದ್ದ ಮಹಿಳೆ ಮೃತಪಟ್ಟಿರುವುದನ್ನು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.
ಮುಂಬೈನಲ್ಲಿ ಅಧಿಕ ಕರೊನಾ ಸೋಂಕಿಗೆ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಪಾಯಕಾರಿ ವಲಯಕ್ಕೆ ರಾಜ್ಯ: ರಾಜ್ಯದಲ್ಲಿ ಕರೆನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಹೀಗಾಗಿ ರಾಜ್ಯ ಈಗ ಅಪಾಯಕಾರಿ ವಲಯ ತಲುಪಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ಡಾ. ಪ್ರಕಾಶ್ ತಿಳಿಸಿದ್ದಾರೆ.
ರಾಜ್ಯಕ್ಕೆ 2 ವಾರ ಅತ್ಯಂತ ಪ್ರಮುಖವಾದುದು. ಹೀಗಾಗಿ ಸಾರ್ವಜನಿಕರು 2 ವಾರಗಳ ಕಾಲ ಮನೆಬಿಟ್ಟು ಹೊರಗೆ ಬರಬೇಡಿ ಎಂದು ಅವರು ಮನವಿ ಮಾಡಿದ್ದಾರೆ.