ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 388ಕ್ಕೆ ಏರಿಕೆ: ಭಾನುವಾರ ಮಧ್ಯಾಹ್ನದ ವೇಳೆಗೆ ಕೇವಲ ನಾಲ್ವರಿಗೆ ಸೋಂಕು

corona virus 10 mar 20
Published on

ಬೆಂಗಳೂರು: ರಾಜ್ಯದಲ್ಲಿ ಭಾನುವಾರ (ಏ.19) ನಾಲ್ವರಿಗೆ ಕರೊನಾ ಸೋಂಕು ಹರಡಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 388ಕ್ಕೆ ಏರಿದೆ.

ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ವರದಿಯಲ್ಲಿ ಸೋಂಕಿತರ ಸಂಖ್ಯೆ ಗಣೀಯವಾಗಿ ಕಡಿಮೆಯಾಗಿದೆ. 105 ಮಂದಿ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಶನಿವಾರ ಸಂಜೆಯಿಂದ ಭಾನುವಾರ 12 ಗಂಟೆವರೆಗೆ ರಾಜ್ಯದಲ್ಲಿ ನಾಲ್ವರು ಹೊಸ ಸೋಂಕಿತರು ಮಾತ್ರ ಪತ್ತೆಯಾಗಿದ್ದಾರೆ. ಮೈಸೂರು ಹಾಗೂ ನಂಜನಗೂಡಿನ ತಲಾ ಇಬ್ಬರಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ.

ಮೈಸೂರಿನಲ್ಲಿ ಪತ್ತೆಯಾದ ಇಬ್ಬರು ಸೋಂಕಿತರು ದೆಹಲಿ ಪ್ರಯಾಣ ಮಾಡಿದ್ದಾರೆ. ನಂಜನಗೂಡಿನ ಸೋಂಕಿತರು ರೋಗಿ ಸಂಖ್ಯೆ 52 ಹಾಗೂ ರೋಗಿ ಸಂಖ್ಯೆ 319ರ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿ ಇವರಿಗೆ ಸೋಂಕು ಹರಡಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇದೆ ಮೊದಲ ಬಾರಿಗೆ ಕಡಿಮೆಯಾಗಿದೆ. ಕೆಂಪು ವಲಯದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಸದ್ಯ ಯಾವುದೇ ಸೋಂಕಿತರು ಪತ್ತೆಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net