

ರಾಣೆಬೆನ್ನೂರ: ಕರೊನಾ ಶಂಕಿತನ ಮೃತದೇಹವನ್ನು ಸಮೀಪದ ಬಸ್ ನಿಲ್ದಾಣದಲ್ಲೇ ಆಸ್ಪತ್ರೆ ಸಿಬ್ಬಂದಿ ಇಟ್ಟು ಹೋಗಿದ್ದ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿತ್ತು.
ನಗರದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಕರೊನಾ ಶಂಕಿತ ವ್ಯಕ್ತಿಯ ಮೃತದೇಹವನ್ನು ಆಸ್ಪತ್ರೆ ಪಕ್ಕದ ಬಸ್ ನಿಲ್ದಾಣದಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ಇಟ್ಟ ಘಟನೆ ಶನಿವಾರ ನಡೆದಿದೆ. ಮೃತದೇಹವನ್ನು ಪಿಪಿಇ ಕಿಟ್ನಿಂದ ಪೂರ್ಣವಾಗಿ ಪ್ಯಾಕ್ ಮಾಡಿದ್ದರಿಂದ ಜನ ಭಯದಲ್ಲಿಯೇ ಓಡಾಡಿದರು. ಇದನ್ನೂ ಓದಿರಿ ಕೋವಿಡ್ಗೆ ಔಷಧಿ ಕೊಡಿಸುವ ನೆಪದಲ್ಲಿ ಅತ್ಯಾಚಾರ! ಸೋಂಕಿನ ಹೆಸರಲ್ಲಿ ಕಾಮುಕರ ಅಟ್ಟಹಾಸ
ಕರೊನಾ ಶಂಕಿತ ವ್ಯಕ್ತಿಯ ಶವವನ್ನು ಬಸ್ ನಿಲ್ದಾಣದಲ್ಲೇ ಬಿಟ್ಟು ಹೋಗಿರುವ ವಿಷಯ ಎಲ್ಲೆಡೆ ಹರಿದಾಡುತ್ತಿದ್ದಂತೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿತು. ನಂತರ ಶವವನ್ನು ಕುಟುಂಬಸ್ಥರ ಜತೆ ಆಂಬುಲೆನ್ಸ್ನಲ್ಲಿ ತೆಗೆದುಕೊಂಡು ಹೋಗಿ, ಹಲಗೇರಿ ರಸ್ತೆಯ ಸ್ಮಶಾನದಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ವ್ಯಕ್ತಿಯ ಸ್ವಾಬ್ ಟೆಸ್ಟ್ ವರದಿ ಇನ್ನೂ ಬಂದಿಲ್ಲ.
ಬಸ್ ನಿಲ್ದಾಣದಲ್ಲಿ ಶವ ಬಿಟ್ಟಹೋದ ಬಗ್ಗೆ ಆಸ್ಪತ್ರೆ ಸಿಬ್ಬಂದಿಯಿಂದ ಮಾಹಿತಿ ಪಡೆದು ಪರಿಶೀಲಿಸುತ್ತೇನೆ ಎಂದು ಟಿಎಚ್ಒ ಡಾ. ಸಂತೋಷಕುಮಾರ ತಿಳಿಸಿದ್ದಾರೆ.