ಥರ್ಡ್ ಅಂಪೈರ್ ಫಲಿತಾಂಶದಲ್ಲಿ ಸಿ.ಟಿ.ರವಿಗೆ ಕೋವಿಡ್ ಪಾಸಿಟಿವ್

RAVI CT
Published on

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ.

ಇತ್ತೀಚೆಗೆ ಒಂದೇ ವಾರದಲ್ಲಿ ಎರಡು ಬಾರಿ ಕರೊನಾ ಪರೀಕ್ಷೆಗೆ ಒಳಗಾಗಿದ್ದ ಸಿ.ಟಿ. ರವಿ ಅವರಿಗೆ ಒಮ್ಮೆ ನೆಗೆಟಿವ್, ಒಮ್ಮೆ ಪಾಸಿಟಿವ್ ಬಂದಿತ್ತು. ಹಾಗಾಗಿ ಶನಿವಾರ 3ನೇ ಟೆಸ್ಟ್ ಮಾಡಿಸಿದ್ದರು. ಈ ಬಗ್ಗೆ ನಿನ್ನೆ(ಭಾನುವಾರ) ಟ್ವಿಟರ್​ನಲ್ಲಿ ಹೇಳಿಕೊಂಡಿದ್ದ ಸಚಿವರು, 'ಥರ್ಡ್ ಅಂಪೈರ್ ರಿಸಲ್ಟ್‌ಗಾಗಿ ಕಾಯುತ್ತಿದ್ದೇನೆ' ಎಂದಿದ್ದರು. ಭಾನುವಾರ ಸಂಜೆ ವರದಿ ಬಂದಿದ್ದು, ಪತ್ನಿ ಪಲ್ಲವಿ, ಗನ್ ಮ್ಯಾನ್ ಮತ್ತು ಕಾರಿನ ಚಾಲಕ ಸೇರಿ ಕಚೇರಿ ಸಿಬ್ಬಂದಿಗೆ ನೆಗೆಟಿವ್ ಬಂದಿದೆ. ಆದರೆ, ಸಿ.ಟಿ.ರವಿ ಅವರಿಗೆ ಕರೊನಾ ಪಾಸಿಟಿವ್ ಬಂದಿದೆ. ಇದನ್ನೂ ಓದಿರಿ ಸಚಿವ ಶ್ರೀರಾಮುಲು ಆಪ್ತ ಪಕ್ಷದಿಂದ ಅಮಾನತು

ಈ ಬಗ್ಗೆ ಇಂದು ಟ್ವೀಟ್​ ಮಾಡಿರುವ ಸಿ.ಟಿ.ರವಿ, “ನಿನ್ನೆ ನಾನು, ಮಡದಿ ಪಲ್ಲವಿ, ನನ್ನ ಸಿಬ್ಬಂದಿ ವರ್ಗ ಕೋವಿಡ್ 19 ಪರೀಕ್ಷೆಗೆ ಒಳಪಟ್ಟಿದ್ದೆವು. ಪಲ್ಲವಿ ಹಾಗೂ ನನ್ನ ಗನ್-ಮ್ಯಾನ್, ಚಾಲಕ ಸೇರಿ ಆಫೀಸ್ ಸಿಬ್ಬಂದಿ ಎಲ್ಲರದ್ದು ನೆಗೆಟಿವ್ ಬಂದಿದೆ. ಥರ್ಡ್ ಅಂಪೈರ್ ಫಲಿತಾಂಶದಲ್ಲಿ ನನಗೆ ಕೋವಿಡ್ ಪಾಸಿಟಿವ್ ಇದೆ ಎಂಬುದು ದೃಢವಾಗಿದೆ'' ಎಂದು ಹೇಳಿಕೊಂಡಿದ್ದಾರೆ.

''ಆದರೆ, ಯಾವುದೇ ತೊಂದರೆಗಳ ಲಕ್ಷಣಗಳಿಲ್ಲದೆ ಸಹಜವಾಗಿದ್ದೇನೆ. ಸೂಕ್ತ ಚಿಕಿತ್ಸೆಗಳನ್ನು ಪಡೆಯುತ್ತ ನಾನು ಇಲ್ಲಿಂದಲೇ ಕೆಲಸ ಮುಂದುವರಿಸಲಿದ್ದು, ಆದಷ್ಟು ಬೇಗ ಗುಣಮುಖನಾಗಿ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ'' ಎಂದು ಸಚಿವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net