ಅಯೋಧ್ಯೆಯಲ್ಲಿ ರಾಮನವಮಿಗೆ ಕರೊನಾ ಕಾಟ

Ayodhya vvani
Published on

ಅಯೋಧ್ಯೆ: ಅಯೋಧ್ಯೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ರಾಮನವಮಿ ಆಚರಣೆಗೆ ಜಿಲ್ಲಾಡಳಿತ ಸಕಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳುತ್ತಿದೆ. ಆದರೆ ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕರೊನಾದಿಂದಾಗಿ ರಾಮನವಮಿ ಆಚರಣೆ ಬಗ್ಗೆ ಆತಂಕ ಎದುರಾಗಿದೆ. ಏ. 2ರಂದು ನಡೆಯಲಿರುವ ರಾಮನವಮಿ ಆಚರಣೆಯಲ್ಲಿ ಸುಮಾರು 10 ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಅನುಜ್ ಕುಮಾರ್ ಝಾ ಹೇಳಿದ್ದಾರೆ. ಆದರೆ ಜನರ ಜೀವದ ಸುರಕ್ಷತೆ ನಿಟ್ಟಿನಲ್ಲಿ ರಾಮನವಮಿ ಆಚರಣೆಯನ್ನು ಕೈಬಿಡುವುದು ಸೂಕ್ತ ಎಂದು ಅಯೋಧ್ಯೆ ಮುಖ್ಯ ಆರೋಗ್ಯಾಧಿಕಾರಿ ಘನಶ್ಯಾಮ್ ಸಿಂಗ್ ಸಲಹೆ ನೀಡಿದ್ದಾರೆ.

ಕರೊನಾವೈರಸ್ ಕುರಿತ ನೋಡಲ್ ಅಧಿಕಾರಿ ಡಾ. ವಿಕಾಸ್ ಸೆನಡು ಕೂಡ ಕಾರ್ಯಕ್ರಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಹೆಚ್ಚು ಜನರು ಗುಂಪು ಸೇರುವುದು ತುಂಬ ಅಪಾಯಕಾರಿ ಎಂದಿದ್ದಾರೆ. ನಾವು ಈಗಾಗಲೇ ರಾಜ್ಯದಲ್ಲಿ ಎಲ್ಲ ಮಾಲ್​ಗಳು, ಶಾಲೆ-ಕಾಲೇಜು ಸೇರಿ ಹೆಚ್ಚು ಜನ ಸೇರುವ ಸ್ಥಳಗಳನ್ನು ಬಂದ್ ಮಾಡಿದ್ದೇವೆ. ಆದರೆ ರಾಮನವಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸುಮಾರು 10 ಲಕ್ಷ ಭಕ್ತರೆಲ್ಲರೂ ಮಾಸ್ಕ್​ಗಳನ್ನು ಧರಿಸುತ್ತಾರೆ. ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು ಅಸಾಧ್ಯ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net