ರಷ್ಯಾ ಪ್ರಧಾನಿ ಮಿಖಾಯಿಲ್‌ಗೂ ಕರೊನಾ ಪಾಸಿಟಿವ್

mikaila april
Published on

ಮಾಸ್ಕೊ: ರಷ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೆ ಕರೊನಾ ಪರೀಕ್ಷೆ ನಡೆಸಲಾಗಿದ್ದು, ಫಲಿತಾಂಶ ‘ಪಾಸಿಟಿವ್’ ಬಂದಿದೆ.

ಈ ವಿಷಯವನ್ನು ಸ್ವತಃ ಅವರೇ ಗುರುವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಇತರ ಸಂಪುಟ ಸದಸ್ಯರಿಗೂ ಕರೊನಾ ಹರಡದಂತೆ ಎಚ್ಚರ ವಹಿಸುವುದಕ್ಕಾಗಿ ತಾವು ತಕ್ಷಣದಿಂದಲೇ ಸ್ವಯಂ ಗೃಹಬಂಧನಕ್ಕೆ ಒಳಗಾಗುವುದಾಗಿ ಅವರು ಹೇಳಿದ್ದಾರೆ.

ತಾವು ಮಾಡಬೇಕಾಗಿದ್ದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ತಾತ್ಕಾಲಿಕವಾಗಿ ಯಾರಾದರೂ ಬೇರೆ ಒಬ್ಬರನ್ನು ನೇಮಿಸುವಂತೆಯೂ ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net