

ಹನೂರು: ನಿನ್ನೆ ಬೆಂಗಳೂರು ನಗರದ ಪೊಲೀಸ್ ಪೇದೆಯೋರ್ವರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ ಈ ಪೇದೆಯಿಂದಾಗಿ ಈಗ ಚಾಮರಾಜನಗರದಲ್ಲಿ ಆತಂಕ ಶುರುವಾಗಿದೆ.
ಇದನ್ನೂ ಓದಿ: ಚಿತ್ರದುರ್ಗ :ಮಾಸ್ಕ್ ಧರಿಸದೇ ಇರುವವರಿಗೆ ಬಿತ್ತು ದಂಡ
ಪೇದೆಯನ್ನು ತಪಾಸಣೆಗೆ ಒಳಪಡಿಸಿದಾಗ ಮೊದಲ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಎರಡನೇ ವರದಿಯಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಆದರೆ ಈ ಮೊದಲ ವರದಿಯ ನಂತರ ಎರಡನೇ ರಿಪೋರ್ಟ್ ಬರುವ ಮಧ್ಯದ ಅವಧಿಯಲ್ಲಿ ಪೇದೆ ಚಾಮರಾಜನಗರದ ಬೆಳ್ತೂರು ಗ್ರಾಮದಲ್ಲಿರುವ ಸಂಬಂಧಿಯೋರ್ವರ ಮನೆಗೆ ಭೇಟಿ ಕೊಟ್ಟಿದ್ದರು.
ಪೇದೆಯಲ್ಲಿ ಸೋಂಕು ಕಾಣಿಸುತ್ತಿದ್ದಂತೆ ಅವರ ಟ್ರಾವೆಲ್ ಹಿಸ್ಟರಿಯನ್ನು ಕೇಳಲಾಗಿತ್ತು. ಸದ್ಯ ಬೆಳ್ತೂರು ಗ್ರಾಮದಲ್ಲಿ ಪೇದೆಯ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾದ 15-20ಜನರನ್ನು ಗುರುತಿಸಿ, ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಡಿಸಿ, ಎಸ್ಪಿ ಸ್ಪಷ್ಟ ಉತ್ತರ ನೀಡಿಲ್ಲ. ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಡಿಎಚ್ಒ ಡಾ. ರವಿ ತಿಳಿಸಿದ್ದಾರೆ.