ಕರೊನಾ ಇನ್ನಷ್ಟು ಲಕ್ಷಣಗಳು ಪತ್ತೆ

corona morning
Published on

ವಾಷಿಂಗ್ಟನ್: ಕರೊನಾಗೆ ಸಂಬಂಧಿಸಿದಂತೆ ಅಮೆರಿಕದ ಅತ್ಯುನ್ನತ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ವ್ಯಾಧಿಗಳ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಇನ್ನೂ ಆರು ಲಕ್ಷಣಗಳನ್ನು ಪಟ್ಟಿ ಮಾಡಿದೆ.

ಲಘು ಲಕ್ಷಣಗಳಿಂದ ಹಿಡಿದು ತೀವ್ರ ಅನಾರೋಗ್ಯದವರೆಗಿನ ಲಕ್ಷಣಗಳನ್ನು ಕೋವಿಡ್-19 ಒಳಗೊಂಡಿದೆ. ವೈರಸ್​ಗೆ ಒಳಗಾದ ಎರಡರಿಂದ 14 ದಿನಗಳೊಳಗೆ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂದು ಸಿಡಿಸಿ ತನ್ನ ವೆಬ್​ಸೈಟ್​ನಲ್ಲಿ ಅಭಿಪ್ರಾಯಪಟ್ಟಿದೆ. ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕೋವಿಡ್-19 ವ್ಯಾಧಿ ಲಕ್ಷಣಗಳೆಂದು ಇದುವರೆಗೆ ಸಿಡಿಸಿ ತಿಳಿಸಿತ್ತು. ಉಸಿರಾಡುವಲ್ಲಿ ತೊಂದರೆ, ಎದೆಯಲ್ಲಿ ನಿರಂತರ ನೋವು ಅಥವಾ ಒತ್ತಡ, ಮಾನಸಿಕ ಗೊಂದಲ ಅಥವಾ ನಿದ್ದೆಯಿಂದ ಎದ್ದ ನಂತರ ಹೆಚ್ಚಿನ ಮಂಪರು, ತುಟಿಗಳು ಅಥವಾ ಮುಖ ನೀಲಿಗಟ್ಟುವಿಕೆ ಇವೇ ಮುಂತಾದ ಲಕ್ಷಣಗಳು ಕಂಡು ಬಂದರೂ ತಕ್ಷಣವೇ ವೈದ್ಯಕೀಯ ಆರೈಕೆ ಪಡೆಯಬೇಕು ಎಂದು ಸಿಡಿಸಿ ಸಲಹೆ ಮಾಡಿದೆ.

ಮೂಗು ಸೋರುವಿಕೆ ಕೋವಿಡ್-19ನಲ್ಲಿ ಒಂದು ಅಪರೂಪದ ಲಕ್ಷಣವಾಗಿದೆ ಹಾಗೂ ಸೀನುವಿಕೆ ಕರೊನಾ ವೈರಸ್ ಸೋಂಕಿನ ಲಕ್ಷಣವಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಹೊಸ ಲಕ್ಷಣ

1. ಶೀತ.

2. ಶೀತ ಮರುಕಳಿಸುವಿಕೆ.

3. ಸ್ನಾಯು ಸೆಳೆತ.

4. ತಲೆ ನೋವು.

5. ಗಂಟಲು ಕೆರೆತ.

6. ರುಚಿ ಕಳೆದುಕೊಳ್ಳುವಿಕೆ ಅಥವಾ ವಾಸನೆ ಗೊತ್ತಾಗದಿರುವಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net