ಕರ್ನಾಟಕದ ಮೇಲೆ ಕರೊನಾ ಕೆಂಗಣ್ಣು- ಬೆಂಬಿಡದ ಮುಂಬೈ ನಂಟು... ಅರ್ಧ ದಿನದಲ್ಲೇ 84 ಪ್ರಕರಣ!

airport
Published on

ಬೆಂಗಳೂರು: ಮುಂಬೈನಿಂದ ಬಂದಿರುವ ಪ್ರಯಾಣಿಕರು ಕರ್ನಾಟಕದಲ್ಲಿ ಆತಂಕ ಸೃಷ್ಟಿಸಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯನ್ನು ಹೆಚ್ಚು ಮಾಡುತ್ತಲೇ ಇದ್ದಾರೆ. ಈ ಮೂಲಕ ರಾಜ್ಯದಲ್ಲಿ ಕರೊನಾ ಮಹಾಮಾರಿ ತನ್ನ ರೌದ್ರಾವತಾರನ್ನು ಮುಂದುವರೆಸಿದೆ.

ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯವರೆಗೆ ಅಂದರೆ ಅರ್ಧ ದಿನದಲ್ಲಿಯೇ ರಾಜ್ಯದಲ್ಲಿ 84 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಮುಂಬೈನಿಂದ ಬಂದವರೇ ಹೆಚ್ಚಾಗಿದೆ.

ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,231ಕ್ಕೆ ಏರಿಕೆಯಾಗಿದೆ. 521 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ ಸಾವಿನ ಸಂಖ್ಯೆ 37ಕ್ಕೆ ಏರಿದೆ. 672 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದಾಗಿ ಸೋಂಕು ಕಾಣಿಸಿಕೊಂಡಿರುವ ಪ್ರಕರಣ ಹೀಗಿದೆ:

ಬೆಂಗಳೂರು ನಗರ- 18, ಮಂಡ್ಯ-17, ಉತ್ತರ ಕನ್ನಡ- 8, ರಾಯಚೂರು- 6, ಕಲಬುರಗಿ-6, ವಿಜಯಪುರ-5, ಗದಗ- 5, ಯಾದಗಿರಿ- 5, ಹಾಸನ- 4, ಕೊಪ್ಪಳ- 3, ಬಳ್ಳಾರಿ-1, ದಾವಣಗೆರೆ-1, ಬೀದರ್​-1, ಕೊಡಗು-1, ಮೈಸೂರು-1, ಬೆಳಗಾವಿ-1

ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net