ರಾಜ್ಯದಲ್ಲಿ ಏಳು ಹೊಸ ಕರೊನಾ ಪ್ರಕರಣ- ನಾಲ್ಕು ತಿಂಗಳ ಶಿಶುವಿಗೂ ಸೋಂಕು: ಕಲಬುರಗಿಯಲ್ಲಿ ಐದು ಹೊಸ ಸೋಂಕಿತರು: 425ಕ್ಕೇರಿದ ಸಂಖ್ಯೆ

corona sanje
Published on

ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಏಳು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಅವುಗಳ ಪೈಕಿ ಐದು ಪ್ರಕರಣ ಕಲಬುರಗಿ ಒಂದರಿಂದಲೇ ಬಂದಿದೆ. ಇನ್ನೆರಡು ಪ್ರಕರಣ ಬೆಂಗಳೂರು ನಗರದಲ್ಲಿ ಪತ್ತೆಯಾಗಿದೆ. ಕಲಬುರಗಿಯಲ್ಲಿ ನಾಲ್ಕು ತಿಂಗಳ ಗಂಡು ಶಿಶು ಸೇರಿದಂತೆ 28, 35 ಮತ್ತು 46 ವಯಸ್ಸಿನ ಮೂವರು ಮಹಿಳೆಯರು ಹಾಗೂ 57 ವರ್ಷದ ಓರ್ವ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ 28 ವರ್ಷದ ಯುವತಿ ಹಾಗೂ 54 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕುಪೀಡಿತರಾದವರ ಸಂಖ್ಯೆ 425ಕ್ಕೆ ಏರಿದ್ದು, ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ 15 ಮಂದಿ ಗುಣಮುಖರಾಗಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ ಒಟ್ಟು 129.

ಕರೊನಾ ಸೋಂಕು ತಡೆಗಟ್ಟಲು ಮಸೀದಿಯಲ್ಲಿ ಯಾವುದೇ ಸಭೆ, ಪ್ರಾರ್ಥನೆ ನಡೆಸದಂತೆ ಹಾಗೂ ಮೃತ ವ್ಯಕ್ತಿಗಳನ್ನು ದಫನ್‌ ಮಾಡಲು ಅನುಮತಿ ನೀಡದಂತೆ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯು ರಾಜ್ಯದ ಎಲ್ಲ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿರುತ್ತದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net