ಹೊಸ ಊರುಗಳಿಗೂ ಒಕ್ಕರಿಸಿತಲ್ಲ ಕೊರನಾ! ನಿಮ್ಮೂರಿನ ವಿವರ ಇಲ್ಲಿದೆ ನೋಡಿ...

Corona 9 May 20
Published on

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಹಾಗೂ ಶಿವಮೊಗ್ಗ ಜಿಲ್ಲೆ ಕರೊನಾ ಸೋಂಕಿನಿಂತ ತತ್ತರಗೊಂಡಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ 54 ಹೊಸ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಇವರ ಪೈಕಿ ಹೆಚ್ಚಿನವರು ಪರ ಊರುಗಳಿಂದ ರಾಜ್ಯಕ್ಕೆ ವಾಪಸಾದವರು.

ಇದಾಗಲೇ ಶಿವಮೊಗ್ಗ ಜಿಲ್ಲೆ ಗ್ರೀಜ್​ ಝೋನ್​ ಪಟ್ಟದಿಂದ ಹೊರಕ್ಕೆ ಬಂದು, ತನ್ನೊಳಗೆ 9 ಹೊಸ ಸೋಂಕಿತರನ್ನು ಸೇರಿಸಿಕೊಂಡು ಬಿಟ್ಟಿದೆ.

ವೈರಸ್​ನ ಸುಳಿವೇ ಇಲ್ಲದೆ ಹಸಿರು ವಲಯ (ಗ್ರೀನ್​ ಝೋನ್​) ಎಂದು ಕರೆಸಿಕೊಂಡು ತಣ್ಣಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ಶಿಕಾರಿಪುರದಲ್ಲಿ ಎಂಟು ಹಾಗೂ ತೀರ್ಥಹಳ್ಳಿಯಲ್ಲಿ ಒಂದು ಪ್ರಕರಣಗಳು ಬೆಳಕಿವೆ ಬಂದಿವೆ. ಈ 9 ಮಂದಿ ಗುಜರಾತ್​ನ ಅಮಹದಾಬಾದ್​ಗೆ ಪ್ರಯಾಣ ಬೆಳೆಸಿ ಬಂದವರಾಗಿದ್ದಾರೆ.

ಅದೇ ರೀತಿ, ರಾಜಸ್ಥಾನದ ಅಜಮೀರ್​ನಿಂದ ಪ್ರಯಾಣ ಬೆಳೆಸಿ ಬಂದ ಬೆಳಗಾವಿ 22ಮಂದಿ, ಬಾಗಲಕೋಟೆಯ 7 ಹಾಗೂ ದಾವಣಗೆರೆ ಓರ್ವನಿಗೆ ಕರೊನಾ ಸೋಂಕು ತಗುಲಿದೆ. ಮಹಾರಾಷ್ಟ್ರದಿಂದ ಬಂದ ಕಲಬುರಗಿಯ ಕಮಲಾಪುರದ ಓರ್ವನಲ್ಲಿ ಸೋಂಕು ಪತ್ತೆಯಾಗಿದೆ. ಬೆಳಗಾವಿಯಲ್ಲಿ ಕಂಡುಬಂದಿರುವ ಹೊಸ ಸೋಂಕಿತರ ಪೈಕಿ ಹೆಚ್ಚಿನವರು 3ರಿಂದ 12 ವರ್ಷ ಒಳಗಿನವರು.

ಸೋಂಕಿತನೊಬ್ಬನ ಸಂಪರ್ಕಕ್ಕೆ ಬಂದಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 7 ಮಂದಿಗೂ ಸೋಂಕು ತಗುಲಿದೆ. ಬೆಂಗಳೂರು ನಗರ 3, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ 1, ಕಲಬುರಗಿಯಲ್ಲಿ 1, ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ 1 ಹಾಗೂ ದಾವಣಗೆರೆ 1 ಹೊಸ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ನಿಮ್ಮ ಜಿಲ್ಲೆಯ ವಿವರ ಹೇಗಿದೆ? ಇಲ್ಲಿದೆ ವಿವರ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net