

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಹೊಸದಾಗಿ 10,704 ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 6,79,356ಕ್ಕೆ ತಲುಪಿದೆ.
ಇನ್ನೊಂದೆಡೆ 9,613 ಮಂದಿ ಸೋಂಕಿನಿಂದ ಗುಣವಾಗಿ ಗುರುವಾರ ಬಿಡುಗಡೆಗೊಂಡಿದ್ದು, ಇದುವರೆಗೆ ಗುಣವಾದವರ ಸಂಖ್ಯೆ 5,52,519ಕ್ಕೆ ಏರಿಕೆಯಾಗಿದೆ. ಅದಾಗ್ಯೂ ರಾಜ್ಯದಲ್ಲಿ 1,17,143 ಪ್ರಕರಣಗಳು ಸಕ್ರಿಯವಾಗಿದ್ದು, ಆ ಪೈಕಿ 853 ಜನರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅವರು ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೇಸರದ ಸಂಗತಿ ಎಂದರೆ ಒಂದೇ ದಿನದಲ್ಲಿ 101 ಮಂದಿ ಕರೊನಾ ಸೋಂಕಿಗೆ ಬಲಿಯಾಗಿದ್ದು, ಇದುವರೆಗೆ ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 9,675ಕ್ಕೆ ತಲುಪಿದೆ.