

ನವದೆಹಲಿ: ಭಾರತದಿಂದ ವಿದೇಶಗಳಿಗೆ ತೆರಳುವ ಭಾರತೀಯರ ಅನುಕೂಲಕ್ಕಾಗಿ ಕೋವಿಡ್ ಲಸಿಕೆಯ ಎರಡನೇ ಹಾಗೂ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ನಡುವಿನ ಅಂತರವನ್ನು ಈಗಿರುವ ಒಂಬತ್ತು ತಿಂಗಳಿಂದ ಆರು ತಿಂಗಳಿಗೆ ಇಳಿಸುವ ಸಾಧ್ಯತೆಯಿದೆ. ವಿಶೇಷವಾಗಿ, ಬೂಸ್ಟರ್ ಡೋಸ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿರುವ ದೇಶಗಳಿಗೆ ಪ್ರಯಾಣಿಸುವ ಭಾರತೀಯರ ಸುಗಮ ಪ್ರಯಾಣಕ್ಕಾಗಿ ಈ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಬೂಸ್ಟರ್ ಡೋಸ್ಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಪರಿಶೀಲಿಸುತ್ತಿರುವ ಸರ್ಕಾರದ ತಜ್ಞರ ಸಮಿತಿಯೊಂದು ಈ ವಿಚಾರವನ್ನು ಚರ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿ ಅನ್ವಯ ಪ್ರಸ್ತುತ ಎರಡನೇ ಹಾಗೂ ಮೂರನೇ ಬೂಸ್ಟರ್ ಡೋಸ್ ನಡುವಿನ ಅಂತರ ಒಂಬತ್ತು ತಿಂಗಳು, ಅಂದರೆ 39 ವಾರವಾಗಿದೆ. ನಂತರ ಅದನ್ನು ಚುನಾವಣಾ ಕಾರ್ಯನಿರತ ಅಧಿಕಾರಿಗಳಿಗಾಗಿ ಪರಿಷ್ಕರಿಸಿ ಮೂರು ತಿಂಗಳಿಗೆ ಇಳಿಸಲಾಗಿತ್ತು.
ಚೀನಾದಲ್ಲಿ ಬಲವಂತದ ಟೆಸ್ಟ್: "ಶೂನ್ಯ & ಕೋವಿಡ್' ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿದ್ದಿಗೆ ಬಿದ್ದಿರುವ ಚೀನಾ, ನಾಗರಿಕರಿಗೆ ಬಲವಂತದಿಂದ ಕರೊನಾ ಪರೀೆ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳನ್ನು ಬಲವಂತವಾಗಿ ನೆಲದಲ್ಲಿ ಮಲಗಿಸಿ ಕೈಕಾಲು ಹಿಡಿದುಕೊಂಡು ಟೆಸ್ಟ್ ಮಾಡುತ್ತಿರುವ ಒಂದು ವಿಡಿಯೋ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಚೀನಾದ ಪ್ರಜೆಗಳು ನಿಜವಾದ ಕರೊನಾ ವ್ಯಾಧಿಗಿಂತ ಅದನ್ನು ಕಟ್ಟಿ ಹಾಕಲು ಹೇರಲಾಗಿರುವ ಲಾಕ್ಡೌನ್ ಮತ್ತು ಇತರ ರ್ನಿಬಂಧಗಳಿಗೆ ಹೆಚ್ಚು ಭಯಪಡುತ್ತಾರೆ ಎನ್ನುವುದಕ್ಕೆ ಶಾಂಘೈ ಮತ್ತಿತರ ಪ್ರದೇಶಗಳಿಂದ ಬರುತ್ತಿರುವ ವರದಿಗಳು ಸಾಯಾಗಿವೆ. ಕರೊನಾ ಪರೀಕ್ಷಾ ಕೇಂದ್ರವೊಂದರಲ್ಲಿ ಪುರುಷನೊಬ್ಬ ಮಹಿಳೆಯನ್ನು ನೆಲದ ಮೇಲೆ ಅದುಮಿ ಹಿಡಿದು ಪರೀಕ್ಷೆ ನಡೆಸುವ ದೃಶ್ಯ ಟ್ವಿಟರ್ನಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ಅಸಹನೀಯ ದುರಂತವಾಗಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂನೆ
ಕರೊನಾ ನಿಯಂತ್ರಣ ನೆಪದಲ್ಲಿ ಚೀನಾದಲ್ಲಿ ವ್ಯಾಪಕವಾಗಿ ಮಾನವ ಹಕ್ಕುಗಳ ಉಲ್ಲಂನೆ ಆಗುತ್ತಿದೆ ಎಂಬ ಆರೋಪ ಕೇಳಿಬರತೊಡಗಿದೆ. ನಿಯಮ ಪಾಲನೆಗೆ ತಪು$್ಪವ ಜನರನ್ನು ಥಳಿಸುವುದು, ಜನರು ಹೊರಗೆ ಬಾರದಂತೆ ಮನೆಗಳ ಬಾಗಿಲುಗಳನ್ನು ವೆಲ್ಡ್ ಮಾಡುವುದು, ಕಬ್ಬಿಣದ ಗೇಟ್ ಅಳವಡಿಸುವುದು ಇವೇ ಮುಂತಾದ ಕ್ರಮಗಳಿಗೆ ಅಧಿಕಾರಿಗಳು ಮುಂದಾಗಿರುವುದು ಜನರ ಅಸಹನೆಯ ಕಟ್ಟೆಯೊಡೆಯಲು ಕಾರಣವಾಗಿದೆ. ಶ್ವೇತವಸ್ತ್ರಧಾರಿ ವೈದ್ಯಕಿಯ ಸಿಬ್ಬಂದಿ ಜನರನ್ನು ಹೊಡೆದು ಕರೆದುಕೊಂಡು ಹೋಗುವುದೇ ಮುಂತಾದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಕೋವಿಡ್ ಸಂತ್ರಸ್ತ ಮಕ್ಕಳಿಗೆ ಕೆವಿಯಲ್ಲಿ ಕಲಿಕೆಗೆ ಅವಕಾಶ
ನವದೆಹಲಿ: ಕೇಂದ್ರ ಸರ್ಕಾರದ ನಿರ್ದೇಶನಾನುಸಾರ ಕೇಂದ್ರೀಯ ವಿದ್ಯಾಲಯಗಳಲ್ಲಿ ಈ ಬಾರಿ ಕೋವಿಡ್ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರವೇಶಾವಕಾಶ ಸಿಗಲಿದೆ. ಇಂತಹ ವಿದ್ಯಾರ್ಥಿಗಳ ಶುಲ್ಕವನ್ನು ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ನಿಧಿಯಿಂದ ಭರಿಸಲಾಗುತ್ತದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಈ ಪ್ರವೇಶಾವಕಾಶ ಲಭ್ಯವಿದೆ. ಇಂತಹ ಮಕ್ಕಳಿಗೆ 23 ವರ್ಷ ತನಕ ಅವರ ಶಿಕ್ಷಣಕ್ಕೆ ಹಣಕಾಸಿನ ನೆರವನ್ನು ಸರ್ಕಾರ ನೀಡಲಿದೆ. ಒಂದನೇ ತರಗತಿಯಿಂದ 12ನೇ ತರಗತಿ ತನಕ ಇವರಿಗೆ ಉಚಿತ ಶಿಕ್ಷಣ ಸಿಗಲಿದ್ದು, ವಿದ್ಯಾಲಯ ವಿಕಾಸ ನಿಧಿ ಶುಲ್ಕ, ಟ್ಯೂಷನ್ ಶುಲ್ಕದಿಂದ ವಿನಾಯಿತಿ ಸಿಗಲಿದೆ.
ಡಬ್ಲ್ಯುಎಚ್ಒ ವರದಿಗೆ ಭಾರತ ಆಕ್ಷೇಪ
ಭಾರತದಲ್ಲಿ 2020 ಜನವರಿ 1ರಿಂದ 2021 ಡಿಸೆಂಬರ್ 31ರ ನಡುವೆ, ಸರ್ಕಾರ ವರದಿ ಮಾಡಿರುವುದಕ್ಕಿಂತ 47 ಲಕ್ಷ ಅಧಿಕ ಜನರು ಕರೊನಾ ವ್ಯಾಧಿಗೆ ಬಲಿಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಗುರುವಾರ ಹೇಳಿದೆ. ದುರ್ಬಲ ಆರೋಗ್ಯ ವ್ಯವಸ್ಥೆಯಿರುವ ದೇಶಗಳಲ್ಲಿ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಹೆಚ್ಚು ಹಣ ಹೂಡುವ ಅಗತ್ಯದತ್ತ ಬೆಟ್ಟು ಮಾಡುತ್ತದೆ ಎಂದು ಡಬ್ಲ್ಯುಎಚ್ಒ ಮಹಾ&ನಿರ್ದೇಶಕ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ಹೇಳಿದ್ದಾರೆ. ಜಗತ್ತಿನಾದ್ಯಂತ ಸರ್ಕಾರಗಳು ಹೇಳಿರುವುದಕ್ಕಿಂತ ಮೂರು ಪಟ್ಟು ಜಾಸ್ತಿ ಜನರು, ಅಂದರೆ 1.49 ಕೋಟಿ ಮಂದಿ ಮೃತಪಟ್ಟಿದ್ದಾರೆ ಎಂದು ಡಬ್ಲ್ಯುಎಚ್ಒ ಹೇಳಿದೆ. ಈ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಸಾವಿನ ಸಂಖ್ಯೆ ಲೆಕ್ಕ ಹಾಕಲು ಡಬ್ಲ್ಯುಎಚ್ಒ ಅನುಸರಿಸುವ ಗಣಿತೀಯ ಮಾಡೆಲ್ಗೂ ಆಕ್ಷೇಪ ದಾಖಲಿಸಿದೆ. ಡಬ್ಲ್ಯುಎಚ್ಒದ "ಅಂಕಿಸಂಖ್ಯೆ ವಿಚಾರದಲ್ಲಿ ದೋಷ ಇದೆ ಹಾಗೂ ವೈಜ್ಞಾನಿಕವಾಗಿ ಪ್ರಶ್ನಾರ್ಹವಾಗಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.