

ನವದೆಹಲಿ: ಕರೊನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿರುವಂತೆಯೇ ಮೂರನೇ ಅಲೆ ಅಕ್ಟೋಬರ್ ತಿಂಗಳ ವೇಳೆಗೆ ಭಾರತಕ್ಕೆ ಅಪ್ಪಳಿಸಬಹುದು ಎಂಬ ಎಚ್ಚರಿಕೆಯನ್ನು ಆರೋಗ್ಯ ಪರಿಣತರು ನೀಡಿದ್ದಾರೆ. ರಾಯ್ಟರ್ಸ್ ಸಂಸ್ಥೆ ನಡೆಸಿದ ಸಮೀೆ ವೇಳೆ 24 ಪರಿಣತರು (ಶೇಕಡ 70ಕ್ಕೂ ಹೆಚ್ಚು) ಈ ಎಚ್ಚರಿಕೆ ನೀಡಿದ್ದಾರೆ. ಎರಡನೇ ಅಲೆಯನ್ನು ನಿಭಾಯಿಸಿದ್ದಕ್ಕಿಂತಲೂ ನಾಜೂಕಾಗಿ ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ 3ನೇ ಅಲೆ ಎದುರಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಗತ್ತಿನ ಪ್ರಮುಖ ಆರೋಗ್ಯ ಸೇವಾ ಪರಿಣತರು, ಡಾಕ್ಟರ್ಗಳು, ವಿಜ್ಞಾನಿಗಳು, ಪ್ರೊೆಸರ್ಗಳು ಭಾಗವಹಿಸಿದ್ದರು. ಲಸಿಕೆ ಅಭಿಯಾನ ಪ್ರಗತಿಯಲ್ಲಿರುವ ಕಾರಣ, ಲಸಿಕೆ ಪಡೆದುಕೊಂಡವರು ಹೊಸ ಸೋಂಕಿನಿಂದ ರಕ್ಷಣೆ ಪಡೆಯಬಹುದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಸಮೀೆಯಲ್ಲಿ ಭಾಗವಹಿಸಿ ದವರ ಪೈಕಿ ಶೇಕಡ 85ಕ್ಕೂ ಹೆಚ್ಚು ತಜ್ಞರು ಮೂರನೇ ಅಲೆ ಅಕ್ಟೋಬರ್ ತಿಂಗಳಲ್ಲಿ ಅಪ್ಪಳಿಸಲಿದೆ ಎಂದಿದ್ದಾರೆ. ಮೂವರು ಪರಿಣತರು ಆಗಸ್ಟ್ ನಲ್ಲಿ ಎಂದರೆ, 12 ಪರಿಣತರು ಸೆಪ್ಟೆಂಬರ್ನಲ್ಲಿ ಎಂದಿದ್ದಾರೆ. ಬಾಕಿ ಉಳಿದ ಮೂವರು ಪರಿಣತರು ನವೆಂಬರ್ ಮತ್ತು ೆಬ್ರವರಿ ನಡುವೆ ಮೂರನೇ ಅಲೆ ನಿರೀಸಬಹುದು ಎಂದಿದ್ದಾರೆ.
ನಿಯಂತ್ರಣಕ್ಕಿದೆ ಹೆಚ್ಚು ಅವಕಾಶ: ಮೂರನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಶೇಕಡ 70ಕ್ಕೂ ಹೆಚ್ಚು ಪರಿಣತರು ಪ್ರತಿಕ್ರಿಯಿಸಿದ್ದು, ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯನ್ನು ಹೆಚ್ಚು ವ್ಯವಸ್ಥಿತವಾಗಿ ಎದುರಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ದೇಶದ ಅರ್ಹ 95 ಕೋಟಿ ಜನಸಂಖ್ಯೆಯಲ್ಲಿ ಶೇಕಡ 5 ಜನರಿಗೆ ಮಾತ್ರ ಪೂರ್ಣ ಪ್ರಮಾಣದ ಲಸಿಕೆ ನೀಡಲಾಗಿದೆ. ಲಸಿಕೆ ಅಭಿಯಾನ ತೀವ್ರವಾಗಿ ನಡೆದರಷ್ಟೇ ಉಳಿದವರೂ ಸೋಂಕನ್ನು ಎದುರಿಸುವುದಕ್ಕೆ ಸಜ್ಜಾಗಬಹುದು ಎಂದಿದ್ದಾರೆ.
ಪರೀೆ ರದ್ದತಿಗೆ ಸುಪ್ರೀಂ ನಕಾರ: ಸ್ನಾತ ಕೋತ್ತರ ಪದವಿಯ ಅಂತಿಮ ವರ್ಷದ ಪರೀೆಯನ್ನು ಮುಂದೂಡಬೇಕು ಅಥವಾ ರದ್ದುಗೊಳಿಸಲು ವೈದ್ಯಕಿಯ ವಿವಿಗಳಿಗೆ ನಿರ್ದೇಶನ ನೀಡಬೇಕೆಂದು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೋರ್ಟ್ ತಳ್ಳಿ ಹಾಕಿದೆ.
ಎಂಟು ಲಕ್ಷದೊಳಕ್ಕೆ ಸಕ್ರಿಯ ಕೇಸ್
ದೇಶಾದ್ಯಂತ ಸಕ್ರಿಯ ಕೇಸ್ಗಳ ಸಂಖ್ಯೆ 73 ದಿನಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ 8 ಲಕ್ಷದೊಳಕ್ಕೆ ಬಂದಿದೆ. ಶುಕ್ರವಾರ ಸಕ್ರಿಯ ಕೇಸ್ಗಳ ಸಂಖ್ಯೆ 7,98,656 ಆಗಿದೆ. 24 ಗಂಟೆ ಅವಧಿಯ ಹೊಸ ಕೇಸ್ ಸಂಖ್ಯೆ 62,480 ಆಗಿದ್ದು ಒಟ್ಟು ಕೇಸ್ 2,97,62,793 ಆಗಿದೆ. ಸತತ ಹನ್ನೊಂದನೇ ದಿನ ಹೊಸ ಕೇಸ್ ಸಂಖ್ಯೆ 1 ಲಕ್ಷದ ಮಿತಿಯೊಳಗೇ ಇದೆ. ಸಾವಿನ ಸಂಖ್ಯೆ ಎರಡು ತಿಂಗಳ ನಂತರ 2,000ದೊಳಕ್ಕೆ ಬಂದಿದೆ. ಶುಕ್ರವಾರ ಸಾವಿನ ಸಂಖ್ಯೆ 1,587 ಆಗಿತ್ತು. ಒಟ್ಟು ಸಾವಿನ ಸಂಖ್ಯೆ 3,83,490 ಆಗಿದೆ.
ಕೌಶಲ ಕೋರ್ಸ್ಗೆ ಪ್ರಧಾನಿ ಚಾಲನೆ
ಕೋವಿಡ್ 19 ಮುಂಚೂಣಿ ಕೆಲಸಗಾರರಿಗಾಗಿ ಸ್ಕಿಲ್ ಇಂಡಿಯಾ ಪ್ರಕಾರ ಆರು ಕಸ್ಟಮೈಸ್ಡ್ ಕ್ರಾಶ್ ಕೋರ್ಸ್ ಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಿದ್ದಾರೆ. ದೇಶಾದ್ಯಂತ 1 ಲಕ್ಷಕ್ಕೂ ಹೆಚ್ಚು "ಕೋವಿಡ್ ವಾರಿಯರ್ಸ್' ಗಳನ್ನು ಸಜ್ಜುಗೊಳಿಸುವಲ್ಲಿ ಈ ಕೋರ್ಸ್ ನೆರವಾಗಲಿದೆ. ದೇಶಾದ್ಯಂತ 26 ರಾಜ್ಯಗಳಲ್ಲಿರುವ 111 ತರಬೇತಿ ಕೇಂದ್ರಗಳಲ್ಲಿ ಇದು ಲಭ್ಯವಿರಲಿದೆ. ದೇಶಾದ್ಯಂತ ಜೂನ್ 21ರಿಂದ 18 ವರ್ಷ ಮೇಲ್ಪಟ್ಟವರಿಗೆ ಎಲ್ಲರಿಗೂ ಲಸಿಕೆ ಲಭ್ಯವಾಗಲಿದೆ. ಈಗಾಗಲೇ 1,500ಕ್ಕೂ ಹೆಚ್ಚು ಆಕ್ಸಿಜನ್ ಪ್ಲಾಂಟ್ಗಳು ಸಿದ್ಧವಾಗಿದ್ದು ಪ್ರತಿ ಜಿಲ್ಲೆಗೂ ತಲುಪಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನೆ 3.0ರ ಪ್ರಕಾರ 276 ಕೋಟಿ ರೂಪಾಯಿ ಇದಕ್ಕೆ ಕೇಂದ್ರ ಸರ್ಕಾರ ಮೀಸಲಿಟ್ಟಿದೆ.
ಕೋರ್ಸ್ಗಳು ಯಾವುವು?
ಮಕ್ಕಳಿಗೆ ಅಪಾಯವಿದೆಯೇ? ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ಅಪಾಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ 40 ಪರಿಣತರ ಪೈಕಿ 26 ಪರಿಣತರು, ಸಂಭಾವ್ಯ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯವಿರುವುದನ್ನು ತಳ್ಳಿಹಾಕಲಾಗದು. ಮಕ್ಕಳಿಗೆ ಲಸಿಕೆ ನೀಡಿಕೆ ಶುರುವಾಗಿಲ್ಲ. ಅವರಿಗೆ ಸೋಂಕು ತಗುಲಿದರೆ ಚಿಕಿತ್ಸೆ ನೀಡುವುದಕ್ಕೂ ಬೇಕಾದ ಮೂಲಸೌಕರ್ಯಗಳೊಂದಿಗೆ ನಾವು ಸಿದ್ಧರಾಗಿಲ್ಲ ಎಂದು ಎಚ್ಚರಿಸಿದ್ದಾರೆ.
ಲಸಿಕೆ ಹಗರಣ
ಮಹಾರಾಷ್ಟ್ರದ ರಾಜಧಾನಿ ಮುಂಬೈನ ಕಂಡಿವಲಿ ಪ್ರದೇಶದಲ್ಲಿ ಲಸಿಕೆ ಹಗರಣಕ್ಕೆ ಸಂಬಂಧಿಸಿ ಹೌಸಿಂಗ್ ಸೊಸೈಟಿ ಮತ್ತು ನಾಲ್ವರ ವಿರುದ್ಧ ಪೊಲೀಸರು ವಂಚನೆ ಪ್ರಕರಣದಡಿ ಎ್ಐಆರ್ ದಾಖಲಿಸಿದ್ದಾರೆ. ಮಧ್ಯಪ್ರದೇಶ ಮೂಲದ ಕರೀಮ್ ಎಂಬಾತನನ್ನು ಬಂಧಿಸಿದ್ದಾರೆ. ಲಸಿಕೆ ಹಗರಣದ ಇನ್ನೊಂದು ಪ್ರಕರಣ ವಸೋರ್ವಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮ್ಯಾಚ್ಬಾಕ್ಸ್ ಪಿಕ್ಚರ್ಸ್ ದೂರು ನೀಡಿದೆ.
ಕಪು$್ಪ ಶಿಲೀಂಧ್ರ ಕೇಸ್ 27,142ಕ್ಕೆ ಏರಿಕೆ
ದೇಶಾದ್ಯಂತ ಕಪು$್ಪ ಶಿಲೀಂಧ್ರ ಕೇಸ್ಗಳ ಸಂಖ್ಯೆ 27,142ಕ್ಕೆ ಏರಿಕೆಯಾಗಿದೆ. ಇದರ ಚಿಕಿತ್ಸೆಗೆ ಅಗತ್ಯವಾದ ಆ್ಯಂೋಟೆರಿಸಿನ್ ಬಿ ಲಭ್ಯತೆಯನ್ನು ಹೆಚ್ಚಿಸುವುದಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ. ಲಸಿಕೆಯಿಂದ ಪುರುಷತ್ವಕ್ಕೆ ಹಾನಿಯಿಲ್ಲ: ೈಜರ್&ಬಯೋ ಎನ್ಟೆಕ್ ಮತ್ತು ಮಾಡೆರ್ನಾ ಲಸಿಕೆ ಪಡೆಯುವುದರಿಂದ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಯಾಗುವುದೆಂಬ ಆತಂಕ ಬೇಡ. ಅಂಥ ಅಪಪ್ರಚಾರಕ್ಕೆ ಕಿವಿಗೊಡಬೇಕಾಗಿಲ್ಲ ಎಂದು ಜೆಎಎಂಎ ರ್ಜನಲ್ನ ಅಧ್ಯಯನ ವರದಿ ತಿಳಿಸಿದೆ. 18&45 ವರ್ಷ ವಯೋಮಾನದ 45 ಪುರುಷರನ್ನು ಈ ಪ್ರಯೋಗಕ್ಕೆ ಒಳಪಡಿಸಲಾಗಿತ್ತು.