50 ಪ್ರಯಾಣಿಕರನ್ನು ಬಲಿ ಪಡೆದ ಒಡಿಶಾ ರೈಲು ದುರಂತ ಸಂಭವಿಸಿದ್ದು ಹೇಗೆ?

Train
Published on

ಒಡಿಶಾ: ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ಎನ್ನಲಾದ ರೈಲು ದುರಂತ ಒಡಿಶಾದ ಬಾಲೇಶ್ವರ ಸಮೀಪ ಇಂದು ಸಂಜೆ ಸಂಭವಿಸಿದ್ದು, 50 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. 

ಶಾಲಿಮಾರ್-ಚೆನ್ನೈ ಕೊರೊಮಂಡಲ್ ಎಕ್ಸ್‌ಪ್ರೆಸ್ ರೈಲುಗಾಡಿಯ 10-12 ಕೋಚ್‌ಗಳು ಬಾಲೇಶ್ವರ ಸಮೀಪ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಪಕ್ಕದ ಇನ್ನೊಂದು ಹಳಿ ಮೇಲೆ ಬಿದ್ದು ಈ ಅಪಘಾತ ಸಂಭವಿಸಿದೆ.

ಕೆಲ ಸಮಯದ ನಂತರ ಆ ಹಳಿಯ ಮೇಲೆ ಬಂದ ಯಶವಂತಪುರ- ಹೌರಾ ರೈಲು ಈ ಮೊದಲೇ ಹಳಿ ತಪ್ಪಿ ಬಿದ್ದಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಯಶವಂತಪುರ- ಹೌರಾ ರೈಲಿನ 3-4 ಬೋಗಿಗಳು ಹಳಿ ತಪ್ಪಿವೆ ಎಂದು ರೈಲ್ವೆ ಇಲಾಖೆಯ ವಕ್ತಾರ ಅಮಿತಾಭ್ ಶರ್ಮಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net