

ಕಾನ್ಪುರ: ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಬಂಧಿಸಿ, ಉತ್ತರ ಪ್ರದೇಶಕ್ಕೆ ಕರೆತರಲಾಗಿತ್ತು. ನಂತರ ಅವನು ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಎನ್ಕೌಂಟರ್ ಮಾಡಲಾಗಿತ್ತು.
ಆದರೆ ಇದೀಗ ಉಜ್ಜಯನಿಯಿಂದ, ಉತ್ತರ ಪ್ರದೇಶಕ್ಕೆ ವಿಕಾಸ್ ದುಬೆಯನ್ನು ಕರೆದುಕೊಂಡು ಬಂದ ವಾಹನದಲ್ಲಿದ್ದ ಪೊಲೀಸ್ ಪೇದೆಯೋರ್ವರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ.
ಪೇದೆಯಲ್ಲಿ ಕರೊನಾ ಇರುವುದು ಶನಿವಾರ ಗೊತ್ತಾಗಿದೆ. ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೊಲೀಸ್ ಪೇದೆಯೊಂದಿಗೆ ಆ ವಾಹನದಲ್ಲಿ ಇದ್ದ ಇನ್ನೂ ನಾಲ್ವರು ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಡ್ರೋನ್ ಪ್ರತಾಪ್ರನ್ನು ಡಿಆರ್ಡಿಒ ವಿಜ್ಞಾನಿಯಾಗಿ ನೇಮಿಸಿದ್ರಾ? ಏನಿದರ ಸತ್ಯಾಂಶ?
ವಿಕಾಸ್ ದುಬೆ ಎನ್ಕೌಂಟರ್ ವೇಳೆ ನಡೆದ ಸಣ್ಣ ಅಪಘಾತದಲ್ಲಿ ಈ ಪೊಲೀಸ್ ಪೇದೆ ಗಾಯಗೊಂಡಿದ್ದರು. ಕೊವಿಡ್ನ ಲಕ್ಷಣಗಳೂ ಸಣ್ಣ ಪ್ರಮಾಣದಲ್ಲಿ ಇದ್ದಿದ್ದರಿಂದ ತಪಾಸಣೆ ಮಾಡಲಾಗಿತ್ತು. ಅವರಲ್ಲೀಗ ಕರೊನಾ ದೃಢಪಟ್ಟಿದೆ. ಪೇದೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಕಾರ್ಯ ನಡೆಯುತ್ತಿದೆ. (ಏಜೆನ್ಸೀಸ್)