ಸಹಕಾರಿಗಳಿಗೆ ಕಾನೂನು ಅರಿವು ಅವಶ್ಯ

sgr co-opp
ಸಾಗರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸುರೇಶ್ ವಾಟಗೋಡು ಉದ್ಘಾಟಿಸಿ ಮಾತನಾಡಿದರು. ನಾಗಭೂಷಣ, ರಾಜು ಪಟೇಲ್, ಈಶ್ವರಪ್ಪ, ಶಾಂತರಾಜ್, ಲಲಿತಾಂಬಿಕಾ ಇತರರಿದ್ದರು.
Published on

ಸಾಗರ: ಸಹಕಾರ ಕ್ಷೇತ್ರ ಅತ್ಯಂತ ವಿಸ್ತರವಾಗಿದ್ದು, ಇಲ್ಲಿ ಕೆಲಸ ಮಾಡುತ್ತಿರುವವರು ಕಾಲಕಾಲಕ್ಕೆ ಕಾನೂನುಗಳ ಬದಲಾವಣೆ ಕುರಿತು ಅರಿವು ಹೊಂದಿರಬೇಕು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸುರೇಶ್ ವಾಟಗೋಡು ಹೇಳಿದರು. ಸಾಗರದ ಗಣಪತಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಮಹಾಮಂಡಲ ಮತ್ತು ಸಹಕಾರ ಇಲಾಖೆಯಿಂದ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, ಪಾರದರ್ಶಕವಾಗಿ ನಡೆಯಬೇಕೆಂಬ ಉದ್ದೇಶದಿಂದ ಸಹಕಾರಿ ಯೂನಿಯನ್ ಸಹಕಾರ ಸಂಘಗಳ ರಿಟನಿರ್ಂಗ್ ಅಧಿಕಾರಿಗಳು ಮತ್ತು ಸಿಇಒಗಳಿಗೆ ಜಿಲ್ಲಾದ್ಯಂತ ತರಬೇತಿ ನೀಡುತ್ತಿದೆ. ತರಬೇತಿ ಪಡೆದವರು ಚುನಾವಣೆ ಪ್ರಕ್ರಿಯೆ ಸಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ತಮ್ಮ ತಂಡದ ಜತೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಸಹಕಾರ ಸಂಘಗಳ ಉಪ ನಿಬಂಧಕ ನಾಗಭೂಷಣ ಸಿ ಕಲ್ಮನೆ, ರಾಜು ಜಿ. ಪಟೇಲ್, ಈಶ್ವರಪ್ಪ, ಶಾಂತರಾಜ್, ಲಲಿತಾಂಬಿಕಾ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net