ಸಂಘಗಳ ಉನ್ನತಿಗೆ ಸದಸ್ಯರ ಸಹಕಾರ ಅಗತ್ಯ

Oplus_16908288
ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ರೀನಾ ಪ್ರಕಾಶ್, ಯು.ಕೆ.ಪೊನ್ನಮ್ಮ, ಕೆ.ಎನ್.ಕಾರ್ಯಪ್ಪ, ಕೊಲ್ಲಿರ ಪಿ.ಚೋಂದಮ್ಮ, ಕೆ.ಎನ್.ಕಾವೇರಪ್ಪ, ಬಿ.ಜಿ.ಪ್ರತೀಶ್, ಟಿ.ಎಸ್.ನಾಣಯ್ಯ, ಎಂ.ಎ.ಸಫೀರ, ಯು.ಕೆ.ಪ್ರೇಮಾವತಿ, ವಿ.ಸಿ. ಸುಧಿ ಭಾಗವಹಿಸಿದ್ದರು.
Published on

ವಿರಾಜಪೇಟೆ: ಸಂಘಗಳ ಉನ್ನತ್ತಿ ಮತ್ತು ಆರ್ಥಿಕವಾಗಿ ಸುಸ್ಥಿತಿಯಲ್ಲಿಡಲು ಸದಸ್ಯರು ಸಹಕಾರ ನೀಡಬೇಕು ಎಂದು ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅದ್ಯಕ್ಷರಾದ ಪಟ್ಟಡ ರೀನಾ ಪ್ರಕಾಶ್ ಹೇಳಿದರು.

ಇಲ್ಲಿನ ಗಾಂಧಿನಗರ ಲಯನ್ಸ್ ಕ್ಲಬ್‌ನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘ 385 ಸದಸ್ಯ ಬಲದೊಂದಿಗೆ ಮುನ್ನಡೆಯುತ್ತಿದೆ. ಲಕ್ಷದವರೆಗೆ ಸಾಲವನ್ನು ಇದೀಗ ಸದಸ್ಯರಿಗೆ ನೀಡಲಾಗಿದ್ದು, ಸಕಾಲದಲ್ಲಿ ಸದಸ್ಯರು ಸಾಲದ ಕಂತುಗಳನ್ನು ಪಾವತಿ ಮಾಡುತ್ತಿದ್ದಾರೆ. ಮುಂದೆ ಠೇವಣಿ ಖಾತೆಯ ಸಾಲ, ಪಿಗ್ಮಿ ಖಾತೆ ಮತ್ತು ಸಾಲ, ಎಸ್‌ಬಿ ಖಾತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲು ಮಾಡಲಾಗುತ್ತದೆ. ಬ್ಯಾಂಕ್ ಸದೃಢವಾಗಲು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯ ಬಲವನ್ನು ಹೊಂದಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್ ಆಡಳಿತ ಮಂಡಳಿಯು ಪ್ರಯತ್ನ ಮಾಡುತ್ತಿದೆ. ಬ್ಯಾಂಕ್ ಆರಂಭಗೊಂಡು ಅಲ್ಪ ಸಮಯದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದರು.

ರಾಜ್ಯ ಸಹಕಾರಿ ಸೌಹಾರ್ದ ಸಂಘದ ಅಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿದರು. ಸಂಘದ ನಿರ್ದೇಶಕ ಯು.ಕೆ.ಪ್ರೇಮಾವತಿ ವಾರ್ಷಿಕ ವರದಿ ವಾಚಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಟ್ಟಡ ಜಿ.ಪ್ರಕಾಶ್ ವಾರ್ಷಿಕ ಆಯವ್ಯಯ ಪತ್ರ ಮಂಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘದ ಉಪಾಕ್ಷ ಎ.ಡಿ.ಗಣಪತಿ, ನಿರ್ದೇಶಕರಾದ ಯು.ಕೆ.ಪೊನ್ನಮ್ಮ, ಕೆ.ಎನ್.ಕಾರ್ಯಪ್ಪ, ಕೊಲ್ಲಿರ ಪಿ.ಚೋಂದಮ್ಮ, ಕೆ.ಎನ್.ಕಾವೇರಪ್ಪ, ಬಿ.ಜಿ.ಪ್ರತೀಶ್, ಟಿ.ಎಸ್.ನಾಣಯ್ಯ, ಎಂ.ಎ ಸಫೀರ, ಯು.ಕೆ. ಪ್ರೇಮಾವತಿ, ವಿ.ಸಿ.ಸುಧಿ, ಬಿ.ಎಂ.ಕೀರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net