

Coolie OTT: ಆಗಸ್ಟ್ 14ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ತಮಿಳು ನಟ, ಸೂಪರ್ಸ್ಟಾರ್ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ಕೂಲಿ ಚಿತ್ರ, ಇದೀಗ ಬಿಡುಗಡೆಗೊಂಡ 20 ದಿನಗಳಲ್ಲೇ ಒಟಿಟಿಗೆ ಎಂಟ್ರಿಕೊಡಲು ಸಜ್ಜಾಗಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರವು, ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾಗಿದ್ದಲ್ಲದೇ, ಚಿತ್ರಪ್ರೇಮಿಗಳ ದುಪ್ಪಟ್ಟು ನಿರೀಕ್ಷೆಯನ್ನು ಹುಸಿ ಮಾಡಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಲೋಕೇಶ್ ಕೂಡ ತುಟಿಬಿಚ್ಚಿದರು. 20 ದಿನಕ್ಕೆ ಭಾರತದಲ್ಲಿ ಚಿತ್ರವು ಒಟ್ಟು 281.30 ಕೋಟಿ ರೂ. ಕಲೆಕ್ಷನ್ ಕಂಡಿದ್ದು, ಉತ್ತಮ ಆದಾಯವನ್ನು ಗಳಿಸುವಲ್ಲಿ ಸೋತಿದೆ.
ಚಿತ್ರದಲ್ಲಿ ಸೂಪರ್ಸ್ಟಾರ್ ರಜಿನಿಕಾಂತ್, ತೆಲುಗು ನಟ ನಾಗಾರ್ಜುನ, ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ, ರಚಿತಾ ರಾಮ್, ಶೋಬಿನ್, ಅಮೀರ್ ಖಾನ್, ಶೃತಿ ಹಾಸನ್, ಸತ್ಯರಾಜ್ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿ ಈ ಚಿತ್ರವು, ಇದೀಗ ಒಟಿಟಿ ಅಂಗಳಕ್ಕೆ ಪ್ರವೇಶಿಸುತ್ತಿರುವುದು ಸದ್ಯ ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸಿದೆ. ಇದೇ ಸೆ.11ರಂದು ಕೂಲಿ ರಿಲೀಸ್ ಆಗಲಿದ್ದು, ಅಮೆಜಾನ್ ಪ್ರೈಮ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ,(ಏಜೆನ್ಸೀಸ್).