

Box Office: ರಜನಿಕಾಂತ್ ಅವರ ಕೂಲಿ ಮತ್ತು ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ಅವರ ವಾರ್ 2 ಚಿತ್ರಗಳು ಆಗಸ್ಟ್ 14, 2025 ರಂದು ಒಟ್ಟಿಗೆ ಬಿಡುಗಡೆಯಾಗಿ, ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿಯನ್ನು ಸೃಷ್ಟಿಸಿದ್ದವು. ಅಂದಹಾಗೆ ಈ ಎರಡೂ ಚಿತ್ರಗಳು ದೊಡ್ಡ ಬಜೆಟ್‌ನ ಪ್ಯಾನ್-ಇಂಡಿಯಾ ಯೋಜನೆಗಳಾಗಿದ್ದು, ಭಾರೀ ನಿರೀಕ್ಷೆಯನ್ನು ಹುಟ್ಟಿಸಿವೆ. ಮೂರನೇ ದಿನಕ್ಕೆ ಚಿತಯ್ರಗಳು ತೆರೆಕಂಡಿದ್ದು, ರಜಿನಿಕಾಂತ್ ಅಭಿನಯದ ಕೂಲಿ ಚಿತ್ರ ತನ್ನ ಗೆಲುವನ್ನು ಸಾಧಿಸುವ ಪ್ರಯತ್ನದಲ್ಲಿ ಹೆಜ್ಜೆ ಇಟ್ಟಿದೆ.
ಅಂದಹಾಗೇ, ಸೂಪರ್ ಸ್ಟಾರ್ ರಜನಿಕಾಂತ್ ಮತ್ತೊಮ್ಮೆ ಬಾಕ್ಸ್ ಆಫೀಸ್ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದು, ಬಿಡುಗಡೆಯಾದ ಎರಡನೇ ದಿನ (ಆಗಸ್ಟ್ 15) ಭಾರತದಲ್ಲಿ (ಎಲ್ಲಾ ಭಾಷೆಗಳಲ್ಲಿ) ಅಂದಾಜು 53.50 ಕೋಟಿ ರೂ. ಗಳಿಸಿದೆ. ಇದು ಕೇವಲ ಎರಡು ದಿನಗಳಲ್ಲಿ ಒಟ್ಟು 118.50 ಕೋಟಿ ರೂ.ಗಳನ್ನು ಗಳಿಸಿದೆ.
ಇದನ್ನೂ ಓದಿ: ಪೊಲೀಸರಿಂದ ಹಲ್ಲೆ ಆರೋಪ, ಯುವಕ ಆತ್ಮಹತ್ಯೆ
ಸುದ್ದಿ ಮೂಲಗಳ ಪ್ರಕಾರ ಕೂಲಿ ಚಿತ್ರವು ತನ್ನ ಮೊದಲ ದಿನದಂದು 65 ಕೋಟಿ ರೂ. ಕಲೆಕ್ಷನ್‌ನೊಂದಿಗೆ ಭರ್ಜರಿ ಆರಂಭವನ್ನು ನೀಡಿತ್ತು, ಇದು 2025 ರ ಅತಿದೊಡ್ಡ ಭಾರತೀಯ ಓಪನರ್ಗಳಲ್ಲಿ ಒಂದಾಗಿದೆ. ಇನ್ನು ಎರಡನೇ ದಿನ ಸಿನಿಮಾದ ವೀಕ್ಷಣೆಯಲ್ಲಿ ಸ್ವಲ್ಪ ಕುಸಿತಕಂಡಿದ್ದರೂ, ಸ್ವಾತಂತ್ರ್ಯ ದಿನದ ರಜಾ ದಿನಗಳ ಹೆಚ್ಚಳದಿಂದಾಗಿ ನೋಡುಗರ ಸಂಖ್ಯೆ ಹೆಚ್ಚಾಗಿದೆ.
ಈ ಚಿತ್ರದ ತಮಿಳು ಆವೃತ್ತಿಯು ಶುಕ್ರವಾರ ಶೇ. 80.70 ರಷ್ಟು ಮತದಾನ ಮಾಡಿದ್ದು, ಮೊದಲ ಸ್ಥಾನದಲ್ಲಿದೆ. ತೆಲಗು ರಾಜ್ಯಗಳಲ್ಲಿ ಚಿತ್ರವು ಶೇ. 85.42 ಪ್ರೇಕ್ಷಕರು ವೀಕ್ಷಿಸಿದ್ದು, ಹಿಂದಿಯಲ್ಲಿ ಶೇ. 54.60 ರಷ್ಟು ಪ್ರೇಕ್ಷಕರನ್ನು ಸಿನಿಮಾ ಕಾಯ್ದುಕೊಂಡಿದೆ. ಇನ್ನು ರಜನಿಕಂತ್ ಚಿತ್ರವು ಅಖಿಲ ಭಾರತದಾದ್ಯಂತ ಗಮನ ಸೆಳೆಯುತ್ತಿದೆ.
ಬಾಕ್ಸ್ ಆಫೀಸ್‌ನಲ್ಲಿ ಭಾರೀ ಪ್ರಚಾರ ಪಡೆದಿದ್ದ ಕೂಲಿ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ಅಭಿನಯದ ವಾರ್ 2 ಚಿತ್ರವನ್ನುಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ವಾರ್ 2 ಎರಡನೇ ದಿನ 56.5 ಕೋಟಿ ರೂ. ಗಳಿಸಿದರೆ, ಒಟ್ಟು 108 ಕೋಟಿ ರೂ. ಗಳಿಸಿದ್ದು, ಕೂಲಿ ಚಿತ್ರಕ್ಕಿಂತ ಸುಮಾರು 10 ಕೋಟಿ ರೂ. ಹಿಂದಿದೆ.
ಈ ಎರಡು ಮೆಗಾ ಚಿತ್ರಗಳ ಘರ್ಷಣೆ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದು, ಅಭಿಮಾನಿಗಳು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ನೆರೆದಿದ್ದು, ಸಿನಿಮಾ ನೋಡುವಲ್ಲಿ ಬ್ಯುಸಿಯಾಗಿದ್ದಾರೆ. (ಏಜೆನ್ಸೀಸ್)