ಅಕ್ಕಾ ಕೆಫೆ ನಿರ್ವಣೆ ಆಯ್ಕೆಗೆ ಅಡುಗೆ ಸ್ಪರ್ಧೆ

CTD AKKA CEPPE ---
Published on

ಚಿತ್ರದುರ್ಗ: ಅಕ್ಕಾ ಕೆಫೆ ನಿರ್ವಹಣೆಗೆ ಸ್ವ ಸಹಾಯ ಗುಂಪು ಆಯ್ಕೆಗೆ ನಗರದ ರುಡ್‌ಸೆಟ್ ಸಂಸ್ಥೆಯಲ್ಲಿ ಗುರುವಾರ ಆಹಾರ ಸಿದ್ಧಪಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.

ಜಿಪಂ ಆವರಣದಲ್ಲಿ ಅಕ್ಕ ಕೆಫೆ ಆರಂಭವಾಗುತ್ತಿದೆ. ಇದರ ನಿರ್ವಹಣೆಗೆ ಸ್ವಸಹಾಯ ಗುಂಪನ್ನು ಆಯ್ಕೆ ಮಾಡಬೇಕಾಗಿದೆ. ಇದಕ್ಕಾಗಿ ಏರ್ಪಡಿಸಿದ್ದ ಆಹಾರ ಸಿದ್ಧಪಡಿಸುವ ಸ್ಪರ್ಧೆಯಲ್ಲಿ ಮೂರು ಸ್ವ-ಸಹಾಯ ಗುಂಪುಗಳು ಭಾಗವಹಿಸಿದ್ದವು.

ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಯು ಆಹಾರ ಸಿದ್ಧಪಡಿಸಿರುವ ವಿಧಾನ, ಗುಣಮಟ್ಟ, ರುಚಿ-ಶುಚಿ-ನೈರ್ಮಲ್ಯ, ಉಪಯೋಗಿಸಿದ ಪದಾರ್ಥಗಳು ಹಾಗೂ ಸಿದ್ಧವಾದ ಆಹಾರದ ರುಚಿ, ಗುಣಮಟ್ಟ ಪರಿಶೀಲಿಸಿತು.

ಈ ವೇಳೆ ಮಾತನಾಡಿದ ಸೋಮಶೇಖರ್ ಅಕ್ಕ ಕೆಫೆ ನಿರ್ವಹಣೆಯಲ್ಲಿ ಶುಚಿ-ರುಚಿ ಆಹಾರಕ್ಕೆ ಒತ್ತು ನೀಡಬೇಕಿದೆ ಎಂದರು.

ಜಿಪಂ ಡಿಎಸ್ ಡಾ. ರಂಗಸ್ವಾಮಿ, ಮುಖ್ಯಯೋಜನಾಧಿಕಾರಿ ಗಾಯತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಆಹಾರ ಸುರಕ್ಷತಾ ಅಧಿಕಾರಿ ನಂದಿನಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ವೇಮಣ್ಣ, ರುಡ್‌ಸೆಟ್ ಸಂಸ್ಥೆ ನಿರ್ದೇಶಕ ಬಸವರಾಜ್, ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಯೋಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net