

ಕೋಲ್ಕತ: ವಯಸ್ಕ ಯುವತಿ ಅನ್ಯಧರ್ವಿುಯ ಪುರುಷನನ್ನು ತನ್ನಿಚ್ಛೆಯಂತೆ ಮದುವೆಯಾಗಿ, ಮತಾಂತರಗೊಂಡಿದ್ದರೆ ಆ ವಿಚಾರದಲ್ಲಿ ಯಾರೊಬ್ಬರ ಹಸ್ತಕ್ಷೇಪಕ್ಕೂ ಅವಕಾಶ ಇಲ್ಲ ಎಂದು ಕಲ್ಕತ್ತ್ತ ಹೈಕೋರ್ಟ್ ತೀರ್ಪು ನೀಡಿದೆ. ಪ್ರಭಾವ ಬಳಸಿ 19 ವಯಸ್ಸಿನ ಮಗಳನ್ನು ಮದುವೆ ಮಾಡಿಕೊಂಡು, ಮತಾಂತರ ಮಾಡಲಾಗಿದೆ ಎಂದು ತಂದೆಯೊಬ್ಬರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಆಕೆ, ‘ತನ್ನಿಚ್ಛೆಯಂತೆ ಮದುವೆಯಾಗಿದ್ದೇನೆ’ ಎಂದು ಹೇಳಿಕೆ ನೀಡಿದ್ದರೂ, ಬಿಗಿಯಾದ ಸನ್ನಿವೇಶದ ಒತ್ತಡಕ್ಕೆ ಸಿಲುಕಿ ಆಕೆ ಹಾಗೆ ಹೇಳಿಕೆ ನೀಡಿದ್ದಾಳೆಂದು ತಂದೆ ಆಪಾದಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಪೀಠ ತನ್ನಿಷ್ಟದಂತೆ ಮದುವೆ, ಮತಾಂತರಗೊಂಡು ಹೆತ್ತವರ ಬಳಿ ವಾಪಸಾಗುವುದಿಲ್ಲ ಎಂಬ ಯುವತಿಯನ್ನು ನಾವು ತಡೆಯಲಾಗದು ಎಂದು ಅರ್ಜಿದಾರರಿಗೆ ತಿಳಿಸಿತು.
ಹಾಗಿದ್ದರೂ ತಂದೆಯ ಅನುಮಾನಗಳನ್ನು ಬಗೆಹರಿಸಲು ಯುವತಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ರನ್ನು ಭೇಟಿ ಮಾಡಿ ಹೇಳಿಕೆ ನೀಡುವಂತೆ ಹೈಕೋರ್ಟ್ ಸೂಚಿಸಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..