ಸಿಎಂ ಪುತ್ರನ ಹೆಸರಲ್ಲಿ ನಕಲಿ ಖಾತೆ ತೆರೆದು ವಿವಾದಾತ್ಮಕ ಹೇಳಿಕೆ

Yathindra Siddaramaiah
Published on

ಬೆಂಗಳೂರು: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಪೇಜ್ ತೆರೆದ ಕಿಡಿಗೇಡಿಗಳು ವಿವಾದಾತ್ಮಕ ಪೋಸ್ಟರ್‌ಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಈ ಕುರಿತು ಜಾಲಹಳ್ಳಿ ಪೊಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡ ಶಶಾಂಕ್‌ಗೌಡ ದೂರು ಸಲ್ಲಿಸುತ್ತಲೇ ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.

ಯತೀಂದ್ರ ಅಭಿಮಾನಿಗಳ ಬಳಗ ಎಂಬ ನಕಲಿ ಫೇಸ್‌ಬುಕ್ ಖಾತೆಯಲ್ಲಿ ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ. ಆರ್.ಆರ್. ನಗರ ಕಾಂಗ್ರೆಸ್ ನಾಯಕಿ ಕುಸುಮಾ ವಿರುದ್ಧವೂ ಕಿಡಿಗೇಡಿಗಳು ಅವಹೇಳನ ಮಾಡಿದ್ದಾರೆ.

ಡಿಪಿಯಲ್ಲಿ ಯತೀಂದ್ರ ಫೋಟೋ ಹಾಕಿರುವ ಆರೋಪಿಗಳು, ಸಿದ್ದರಾಮಯ್ಯ ಮತ್ತು ಟಿಪ್ಪು ಸುಲ್ತಾನ್ ಭಾವಚಿತ್ರಗಳನ್ನು ಮಾರ್ಫಿಂಗ್ ಮಾಡಿದ್ದಾರೆ. ಅಶ್ಲೀಲ ಪದಗಳನ್ನು ಬಳಸಿ ಅಸಭ್ಯ ಫೋಟೋಗಳನ್ನು ಹಾಕಿ ಸಾರ್ವಜನಿಕರನ್ನು ಪ್ರಚೋದಿಸಿರುವ ಆರೋಪಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net