

Controversial Film: ಯಾವುದೇ ಚಿತ್ರೋದ್ಯಮವಾಗಿದ್ದರೂ, ದಿಟ್ಟ ಹಾಗೂ ಬೋಲ್ಡ್ ಕಥಾಹಂದರ ಹೊಂದಿರುವ ಸಿನಿಮಾಗಳು ಖಂಡಿತವಾಗಿಯೂ ಎಲ್ಲರ ಗಮನ ಸೆಳೆಯುತ್ತದೆ ಮತ್ತು ವ್ಯಾಪಕ ಚರ್ಚೆ, ಟೀಕೆಗಳಿಗೆ ಗ್ರಾಸವಾಗುತ್ತವೆ. ಆದಾಗ್ಯೂ, ನಿರ್ದೇಶಕರು ಮತ್ತು ನಿರ್ಮಾಪಕರು ತಮ್ಮ ಚಿತ್ರಗಳಲ್ಲಿ ಸಮಾಜದಲ್ಲಿ ನಡೆಯುವ ಕೆಲವು ನೈಜ ಘಟನೆಗಳನ್ನು ತೋರಿಸುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ನಿಜಕ್ಕೂ ಗಟ್ಟಿ ನಿರ್ಧಾರ ಹಾಗೂ ಧೈರ್ಯ ಬೇಕೇ ಬೇಕು. ಈ ಕುರಿತು ಸ್ವತಃ ಬಹಿರಂಗವಾಗಿಯೂ ಹೇಳಿಕೆ ನೀಡುತ್ತಾರೆ. ಅದನ್ನೇ ಪ್ರಯತ್ನಿಸಿದ ಈ ಚಿತ್ರದ ನಿರ್ದೇಶಕರಿಗೆ ಆಗಿದ್ದು ಕೇವಲ ಬೇಸರ.
ಸಮಾಜದಲ್ಲಿ ನಡೆಯುತ್ತಿರುವ ಒಂದು ನೈಜ ಕಥೆಯನ್ನು ತಮ್ಮ ಚಿತ್ರದ ಮೂಲಕ ಜನರಿಗೆ ತೋರಿಸಲು ಮುಂದಾದಾಗ ಅದಕ್ಕೆ ಎದುರಾದ ಪರಿಸ್ಥಿತಿ, ಪಟ್ಟ ಪಾಡು ಒಂದೆರೆಡಲ್ಲ ಎಂಬುದನ್ನು ಕಳೆದ ಬಾರಿ ಮುಕ್ತವಾಗಿ ಹಂಚಿಕೊಂಡಿದ್ದ ಜಯಪ್ರಕಾಶ್, ಹಲವು ವಿಷಯಗಳನ್ನು ಸಿನಿಪ್ರಿಯರ ಮುಂದೆ ಬಹಿರಂಗಪಡಿಸಿದ್ದರು. ಗ್ಲೋಯಿಂಗ್ ಟಂಗ್ಟೆನ್, ಮ್ಯಾನ್‌ಕೈಂಡ್ ಸಿನಿಮಾಸ್ ಮತ್ತು ನಿಟ್ಸ್ ಪ್ರೊಡಕ್ಷನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ 'ಜೈ ಭೀಮ್' ಚಿತ್ರ ಖ್ಯಾತಿಯ ನಟಿ ಲಿಜೋಮೋಲ್ ಜೋಸ್ ಲೆಸ್ಬಿಯನ್ ಆಗಿ ನಟಿಸಿದ್ದಾರೆ.
'ಕಾದಲ್ ಎನ್ನಬದು ಪುದುವುದಮೈ' ಚಿತ್ರದಲ್ಲಿ ತೆಲುಗು ನಟರಾದ ವಿನೀತ್ ಮತ್ತು ರೋಹಿಣಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕಳೆದ ತಿಂಗಳು ಪ್ರೇಮಿಗಳ ದಿನದಂದು ಚಿತ್ರ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವು ಸಲಿಂಗಕಾಮಿ ಥೀಮ್ ಹೊಂದಿದೆ ಎಂಬ ಕಾರಣಕ್ಕೆ ಅನೇಕ ನಟಿಮಣಿಯರು ನಟಿಸಲು ನಿರಾಕರಿಸಿದ್ದರು. ಇದರೊಟ್ಟಿಗೆ ಸಿನಿಮಾ ಕೂಡ ರಿಲೀಸ್ಗೂ ಮುನ್ನವೇ ಭಾರೀ ವಿವಾದ, ಟೀಕಗೆ ಗುರಿಯಾಗಿತ್ತು.
ಇದೀಗ ಚಿತ್ರ ಒಟಿಟಿಗೆ ಲಗ್ಗೆಯಿಟ್ಟಿದ್ದು, ಮಾ.14ರಿಂದ 'ಟೆಂಟ್ಕೊಟ್ಟ' ಒಟಿಟಿ ಪ್ಲಾಟ್ಫಾರ್ಮನ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಪ್ರಸ್ತುತ ತಮಿಳು ಆವೃತ್ತಿಯಲ್ಲಿ ಮಾತ್ರ ಉಪಶೀರ್ಷಿಕೆಗಳೊಂದಿಗೆ ಚಿತ್ರ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾ ಒಳ್ಳೆಯ ಸಂದೇಶದೊಂದಿಗೆ ನಿರ್ಮಿಸಲಾಗಿದೆ ಎಂದು ತಮಿಳು ನಟ ಸೂರ್ಯ ಪತ್ನಿ, ನಟಿ ಜ್ಯೋತಿಕಾ ಚಿತ್ರವನ್ನು ಮೆಚ್ಚಿದ್ದಾರೆ,(ಏಜೆನ್ಸೀಸ್).