

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ (ಎನ್ಬಿಟಿಐ) ದಲ್ಲಿ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಿಆರ್ ಅಸಿಸ್ಟೆಂಟ್ 1 ಹುದ್ದೆ ಇದೆ. ಅಭ್ಯಥಿರ್ಗಳು ಯಾವುದೇ ಪದವಿ ಅಥವಾ ಸಮೂಹ ಸಂವಹನ / ಪತ್ರಿಕೋದ್ಯಮ ವಿಷಯದಲ್ಲಿ ಪದವಿ/ ಡಿಪ್ಲೊಮಾ ಪಾಸಾಗಿರಬೇಕು.
ಕನ್ಸಲ್ಟೆಂಟ್ (ಎಸ್ಟಾಬ್ಲಿಷ್ಮೆಂಟ್)1 ಹುದ್ದೆ ಇದೆ. ಪ್ರೊಡಕ್ಷನ್ ಎಕ್ಸಿಕ್ಯೂಟಿವ್ 1 ಹುದ್ದೆ ಇದೆ. ಮೆಟ್ರಿಕ್ಯೂಲೇಷನ್ ಅಥವಾ ತತ್ಸಮಾನ ಪಾಸಾಗಿರಬೇಕು ಜತೆಗೆ ಮೂರು ವರ್ಷಗಳ ಡಿಪ್ಲೊಮಾ ಪ್ರಿಂಟಿಂಗ್ ಟೆಕ್ನಾಲಜಿ ಜತೆಗೆ ಎರಡು ವರ್ಷಗಳ ಪೂರ್ಣಾವಧಿ ಪಿಜಿ ಡಿಪ್ಲೊಮಾ ಬುಕ್ ಪಬ್ಲಿಷಿಂಗ್ ಕೋರ್ಸ್ (ಬುಕ್ ಪ್ರೊಡಕ್ಷನ್ ಸ್ಪೆಷಲೈಸೇಷನ್) ಆಗಿರಬೇಕು.
ಅಡ್ಮಿನ್ ಎಕ್ಸಿಕ್ಯೂಟಿವ್ 1 ಹುದ್ದೆ, ಮಾರ್ಕೆಟಿಂಗ್ ಅಸಿಸ್ಟೆಂಟ್ 1 ಹುದ್ದೆ ಇದೆ. ಪದವಿ ಪಾಸಾಗಿರಬ?ಏಕು. ಎಂಬಿಎ/ ಪಿಜಿ ಡಿಪ್ಲೊಮಾ ಮಾರ್ಕೆಟಿಂಗ್, ಸೇಲ್ಸ್, ಡಿಸ್ಟ್ರಿಬ್ಯೂಷನ್ ಆ್ಯಂಡ್ ಎಕ್ಸ್ಪರ್ಟ್ ವಿಷಯದಲ್ಲಿ ಎಂಬಿಎ/ ಪಿಜಿ ಡಿಪ್ಲೊಮಾ ಅಪೇಕ್ಷಣಿಯ. ಮೇಲೆ ತಿಳಿಸಿದ ಹುದ್ದೆಗಳಿಗೆ ನಿಗದಿತ ಶಿಕ್ಷಣದೊಂದಿಗೆ ಕಾರ್ಯಾನುಭವ ಹೊಂದಿರಬೇಕು. ಗರಿಷ್ಠ ವಯೋಮಿತಿ 45 ವರ್ಷ,
ಮಾಸಿಕ 30 ಸಾವಿರ ರೂ. ದಿಂದ 40 ಸಾವಿರ . ವೇತನ ಇರುತ್ತದೆ. ಕನ್ಸಲ್ಟೆಂಟ್ (ಎಸ್ಟಾಬ್ಲಿಷ್ಮೆಂಟ್) ಹುದ್ದೆಗೆ ಗರಿಷ್ಠ ವಯೋಮಿತಿ 65 ವರ್ಷ ವಯೋಮಿತಿ, ಮಾಸಿಕ 45 ಸಾವಿರ ರೂ. ವೇತನ ಇರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ನಲ್ಲಿರುವ ನಿಗದಿತ ನಮೂನೆಯ ಅರ್ಜಿಯನ್ನು ಭರ್ತಿ ಮಾಡಿ ಏಪ್ರಿಲ್ 13 ರೊಳಗೆ ಮೇಲ್ ಮೂಲಕ ಕಳುಹಿಸಬಹುದು. ಮಾಹಿತಿಗೆ ವೆನ್ಸೈಟ್ https://www.nbtindia.gov.in