ಐಎಂಎದಿ೦ದ ಸಮಾಜಮುಖಿ ಕಾರ್ಯ

6 Dwd 5
Published on

ಧಾರವಾಡ: ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ಎಲ್ಲರೂ ಜತೆಗೂಡಿ ಸಾಗೋಣ ಎಂದು ಐಎಂಎ ಧಾರವಾಡ ಘಟಕದ ನೂತನ ಅಧ್ಯಕ್ಷ ಡಾ. ಜಗದೀಶ ನಿರಡಿ ಹೇಳಿದರು.

ನಗರದ ಐಎಂಎ ಭವನದಲ್ಲಿ ಜರುಗಿದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಸ್ಥೆಯಿ0ದ ಕಾಲಕಾಲಕ್ಕೆ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತ ಬಂದಿದ್ದೇವೆ. ಉಪನ್ಯಾಸ, ಸಾಧಕರಿಗೆ ಸನ್ಮಾನ, ಹಿರಿಯರ ಸ್ಮರಣೆಯಂಥ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಮಾಜಕ್ಕೆ ಸ್ಪಂದಿಸುವ ಕೆಲಸ ನಮ್ಮದು ಎಂದರು.

ಕರ್ನಾಟಕ ಮೆಡಿಕಲ್ ಕೌನ್ಸಿಲ್ ಸದಸ್ಯ ಡಾ. ವೀರಭದ್ರಯ್ಯ ಟಿ.ಎ. ಮಾತನಾಡಿ, ನಿರಂತರವಾಗಿ ಸಮಾಜಮುಖಿ ಕೆಲಸ ಮಾಡುತ್ತ ಸಂಸ್ಥೆ ಮನೆ ಮಾತಾಗಲಿ ಎಂದು ಹಾರೈಸಿದರು.

ನೂತನ ಕಾರ್ಯದರ್ಶಿಯಾಗಿ ಡಾ. ರಾಜೀವ ಗೋಠೆ, ಖಜಾಂಚಿಯಾಗಿ ಡಾ. ಆದಿತ್ಯ ಪಾಂಡುರ0ಗಿ ಅಧಿಕಾರ ಸ್ವೀಕರಿಸಿದರು.

ನಿಕಟಪೂರ್ವ ಅಧ್ಯಕ್ಷ ಡಾ. ನವೀನ ಮಂಕಣಿ, ಕಾರ್ಯದರ್ಶಿ ಡಾ. ಸುಹಾಸ ಹಂಚಿನಮನಿ ಹಾಗೂ ಖಜಾಂಚಿ ಡಾ. ಸಪನ್ ಡಿ.ಎಸ್. ಹಾಗೂ ನಗರದ ಹಿರಿಯ ವೈದ್ಯರು ಉಪಸ್ಥಿತರಿದ್ದರು. ಡಾ. ಶಿವಕುಮಾರ ಕುಂಬಾರ ನಿರ್ವಹಿಸಿದರು. ಡಾ. ಪ್ರಮೋದ ಛಬ್ಬಿ  ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net