

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಂಚಲನವುಂಟು ಮಾಡಿದ ಅಧಿಕಾರ ಹಂಚಿಕೆ ಸೂತ್ರದ ಹೇಳಿಕೆ ಕುರಿತು ಮತ್ತಷ್ಟು ನಾಯಕರು ಪ್ರತಿಕ್ರಿಯೆ ನೀಡಿದ್ದು, ಚರ್ಚೆ ವಿಸ್ತರಣೆಗೊಂಡಿದೆ.
ಗೃಹ ಸಚಿವ ಜಿ.ಪರಮೇಶ್ವರ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ, ಕೆ.ಎಚ್.ಮುನಿಯಪ್ಪ ಕೂಡ ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು. ಅದಕ್ಕೀಗ ಪಕ್ಷದ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಕೂಡ ದನಿಗೂಡಿಸಿದ್ದಾರೆ.
ಅಧಿಕಾರ ಹಂಚಿಕೆ ಸೂತ್ರದ ಮಾತುಕತೆ ಆಗಿದೆ ಎಂಬ ಮುನಿಯಪ್ಪ ಹೇಳಿಕೆ ವಿಚಾರಕ್ಕೆ ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದ ಬಿ.ಕೆ.ಹರಿಪ್ರಸಾದ್, ಮುನಿಯಪ್ಪನವರು ಮನೋರಂಜನೆ ತೆಗೆದುಕೊಳ್ಳಲಿ. ದೆಹಲಿಯದ್ದು ನನಗೆ ಅಷ್ಟು ಗೊತ್ತಿಲ್ಲ. ಮುನಿಯಪ್ಪನವರು ದೆಹಲಿ ನಾಯಕರು. ಅವರಿಗೆ ಅಲ್ಲಿ ನಡೆಯೋದೆಲ್ಲ ಗೊತ್ತಿರುತ್ತೆ. ಅವರು ದೊಡ್ಡವರು, ಅವರಿಗೆ ಗೊತ್ತಿರುವಷ್ಟು ನಮಗೆ ಗೊತ್ತಿಲ್ಲ ಎಂದರು.
ನಾಲ್ಕು ದಿನಗಳ ಹಿಂದಷ್ಟೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಷ್ಟ್ರೀಯ ಸುದ್ದಿವಾಹಿನಿಯ ಸಂದರ್ಶನದಲ್ಲಿ, ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಒಡಂಬಡಿಕೆಯಾಗಿದೆ ಎಂದು ಹೇಳಿಕೆ ನೀಡಿದ್ದರು.