ಕಾಸರಗೋಡಿನಲ್ಲಿ 540 ಹಾಸಿಗೆಗಳ ಹೈಟೆಕ್ ಕಂಟೇನರ್​ ಆಸ್ಪತ್ರೆ; ಟಾಟಾ ನೆರವು

State-1
Published on

ಕಾಸರಗೋಡು: ಕೋವಿಡ್-19 ವಿರುದ್ಧ ಕೇರಳ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಟಾಟಾ ಗ್ರೂಪ್ಸ್​ನ 540 ಹಾಸಿಗೆಗಳ ಆಸ್ಪತ್ರೆ ವರದಾನವಾಗಲಿದೆ. ಜಿಲ್ಲೆಯ ತೆಕ್ಕಿಲ್ ಗ್ರಾಮದಲ್ಲಿ ಈ ಆಸ್ಪತ್ರೆಯ ನಿರ್ಮಾಣ ಕಾರ್ಯ ಕೊನೇ ಹಂತದಲ್ಲಿದೆ. ಜುಲೈ 30ರಂದು ರಾಜ್ಯ ಸರ್ಕಾರಕ್ಕೆ ಆಸ್ಪತ್ರೆಯನ್ನು ಹಸ್ತಾಂತರಿಸುವ ಉದ್ದೇಶವಿದೆ. 15 ಕೋಟಿ ರೂ. ವೆಚ್ಚದಲ್ಲಿ ಮೂರು ತಿಂಗಳಲ್ಲಿ ಆಸ್ಪತ್ರೆ ನಿರ್ವಿುಸಿದ್ದು, 128 ಕೊಠಡಿಗಳನ್ನು ಹೊಂದಿದೆ.

ವಿಶೇಷತೆಗಳು: ಆಸ್ಪತ್ರೆಯನ್ನು 3 ವಲಯಗಳನ್ನಾಗಿ ವಿಂಗಡಿಸಿ, ಝೆೊನ್ 1 ಮತ್ತು 3ರಲ್ಲಿ ಕ್ವಾರಂಟೈನ್ ಸೌಲಭ್ಯ. ಝೆೊನ್ 2ರಲ್ಲಿ ವಿಶೇಷ ಐಸೋಲೇಶನ್ ಸೌಲಭ್ಯಗಳು ಇರಲಿವೆ. ಝೆೊನ್ 1, 3ರ ಪ್ರತಿ ಕಂಟೈನರ್​ಗಳಲ್ಲೂ ತಲಾ 5 ಹಾಸಿಗೆಗಳು, ಒಂದು ಶೌಚಗೃಹ, ಝೆೊನ್ 2ನೇ ಯೂನಿಟ್​ಗಳಲ್ಲಿ ಶೌಚಗೃಹಗಳ ಸಹಿತದ ತಲಾ ಒಂದು ಕೊಠಡಿ ಇರುತ್ತದೆ. ಪ್ರತಿ ಯೂನಿಟ್ 40 ಅಡಿ ಉದ್ದ, 10 ಅಡಿ ಅಗಲವಿರಲಿದೆ. ರಸ್ತೆ, ಸ್ವಾಗತ ಕೊಠಡಿ ಸೌಲಭ್ಯ, ಕ್ಯಾಂಟೀನ್, ವೈದ್ಯರು ಮತ್ತು ದಾದಿಯರಿಗೆ ಪ್ರತ್ಯೇಕ ಕೊಠಡಿಗಳ ಸಹಿತ ಎಲ್ಲ ಸೌಲಭ್ಯಗಳೊಂದಿಗೆ ಆಸ್ಪತ್ರೆ ಸಜ್ಜುಗೊಳ್ಳಲಿದೆ.

ಕಾಸರಗೋಡಿಗೆ ಟಾಟಾ ಕೊಡುಗೆ: ತೆಕ್ಕಿಲ್ ಗ್ರಾಮದ 5 ಎಕರೆ ಜಾಗ, ಜಲ, ವಿದ್ಯುತ್ ಸಹಿತ ಆಸ್ಪತ್ರೆ ನಿರ್ವಣಕ್ಕೆ ಅಗತ್ಯ ಎಲ್ಲ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಮತ್ತು ಕಾಸರಗೋಡು ಜಿಲ್ಲಾಡಳಿತ ಒದಗಿಸುತ್ತಿದೆ. ಆಸ್ಪತ್ರೆ ಯೂನಿಟ್​ಗಳ ಸಹಿತ ಎಲ್ಲ ನಿರ್ವಣಗಳನ್ನೂ ಟಾಟಾ ಸಮೂಹ ಸಂಸ್ಥೆ ಉಚಿತವಾಗಿ ಒದಗಿಸುತ್ತಿದೆ. ಟಾಟಾ ಸಮೂಹ ಸಂಸ್ಥೆ ಕಾಸರಗೋಡು ಜಿಲ್ಲೆಗೆ ಇದೇ ಮೊದಲ ಬಾರಿಗೆ ಇಂತಹ ಸುಸಜ್ಜಿತ ಆಸ್ಪತ್ರೆಯ ಕೊಡುಗೆ ನೀಡುತ್ತಿದೆ.

ಆರಂಭದಲ್ಲಿ ಇದು ಕೋವಿಡ್ ಆಸ್ಪತ್ರೆಯಾಗಿ ಕೆಲಸ ಮಾಡಲಿದೆ. ಸಿಬ್ಬಂದಿ ನೇಮಕಾತಿ, ಚಿಕಿತ್ಸಾ ಸೌಲಭ್ಯ ಇತ್ಯಾದಿಗಳನ್ನು ರಾಜ್ಯ ಸರ್ಕಾರ ನೋಡಿಕೊಳ್ಳಲಿದೆ. ಕೋವಿಡ್ ಸಮಸ್ಯೆ ಸಂಪೂರ್ಣ ಬಗೆಹರಿದ ನಂತರ ಯಾವ ರೀತಿ ಈ ಆಸ್ಪತ್ರೆಯನ್ನು ಬಳಸಬೇಕು ಎಂಬುದನ್ನು ರಾಜ್ಯ ಸರ್ಕಾರ ನಿರ್ಧರಿಸಲಿದೆ. |ಆಂಟನಿ ಪಿ.ಎಲ್. ಯೋಜನೆಯ ಆಡಳಿತಾಧಿಕಾರಿ, ಟಾಟಾ ಸಮೂಹ ಸಂಸ್ಥೆ https://www.vijayavani.net/dna-change-microchips-false-claims-made-about-covid-19-vaccines/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net