ಪ್ರಮುಖ ರೈಲ್ವೆ ಸ್ಟೇಷನ್ಸ್​ನಲ್ಲಿ ಬಳಕೆದಾರರ ಶುಲ್ಕ

DVG Railway Station 22 MAY 20
Published on

ನವದೆಹಲಿ: ಜನನಿಬಿಡ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೇಲೆ ಸಾಂಕೇತಿಕವಾಗಿ ಬಳಕೆದಾರರ ಶುಲ್ಕ ವಿಧಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ. ಇದರಿಂದಾಗಿ ರೈಲು ಪ್ರಯಾಣ ದರ ಸ್ವಲ್ಪ ಏರಿಕೆಯಾಗಲಿದೆ.

ರೈಲ್ವೆ ನಿಲ್ದಾಣಗಳ ಮರುಅಭಿವೃಧಿ ಹಾಗೂ ಮೂಲಸೌಕರ್ಯಗಳ ಆಧುನೀಕರಣಕ್ಕಾಗಿ ವಿಧಿಸಲಾಗುವ ಈ ಶುಲ್ಕವು ಟಿಕೆಟ್​ನಲ್ಲೇ ಒಳಗೊಂಡಿರುತ್ತದೆ. ಮರುಅಭಿವೃಧಿ ಕಾಮಗಾರಿ ಪ್ರಗತಿಯಲ್ಲಿರುವ ಹಾಗೂ ಅಂಥ ಕಾಮಗಾರಿ ನಡೆಯದ ನಿಲ್ದಾಣಗಳಲ್ಲೂ ಬಳಕೆದಾರರ ಶುಲ್ಕ ವಿಧಿಸಲಾಗುತ್ತದೆ. ಕಾಮಗಾರಿಗಳು ಪೂರ್ಣಗೊಂಡ ನಂತರ ಈ ಶುಲ್ಕವು ರಿಯಾಯಿತಿಗಳ ವಿಭಾಗಕ್ಕೆ ಹೋಗುತ್ತದೆ. ಸಂಗ್ರಹಿಸಿದ ಶುಲ್ಕವನ್ನು ನಿಲ್ದಾಣಗಳಲ್ಲಿ ಉತ್ತಮ ಸೌಲಭ್ಯ ಕಲ್ಪಿಸಲು ಬಳಸಲಾಗುತ್ತದೆ ಎಂದು ರೈಲ್ವೆ ಮಂಡಳಿ ಸಿಇಒ ಮತ್ತು ಅಧ್ಯಕ್ಷ ವಿ.ಕೆ. ಯಾದವ್ ಶುಕ್ರವಾರ ಹೇಳಿದ್ದಾರೆ. ದೇಶದಲ್ಲಿ ಸುಮಾರು 7000 ರೈಲು ನಿಲ್ದಾಣಗಳಿವೆ.ಮುಂದಿನ ಐದು ವರ್ಷಗಳಲ್ಲಿ ಜನಸಂಚಾರ ಹೆಚ್ಚಲಿರುವ ಶೇಕಡ 10ರಿಂದ 15ರಷ್ಟು ನಿಲ್ದಾಣಗಳಲ್ಲಿ ಮಾತ್ರವೇ ಬಳಕೆದಾರರ ಶುಲ್ಕ ವಿಧಿಸಲಾಗುತ್ತದೆ.

ಖಾಸಗಿ ರೈಲಿನ ಟಿಕೆಟ್ ದರ ನಿಗದಿ ಸ್ವಾತಂತ್ರ್ಯ: ಖಾಸಗಿ ರೈಲುಗಳ ಟಿಕೆಟ್ ದರವನ್ನು ನಿಗದಿ ಪಡಿಸಲು ರೈಲುಗಳನ್ನು ನಿರ್ವಹಿಸುವ ಆಯಾ ಖಾಸಗಿ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net