ಶೀಘ್ರ ಸುಸಜ್ಜಿತ ಗುರುಭವನ ನಿರ್ಮಾಣ

14hos1p-college-sports
ಹೊಸನಗರದಲ್ಲಿ ತಾಲೂಕು ಪದವಿಪೂರ್ವ ಕಾಲೇಜು ಕ್ರೀಡಾಕೂಟವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ವಾಸುದೇವ್, ಕೆ.ವಿ.ಕೃಷ್ಣಮೂರ್ತಿ, ರವಿಕುಮಾರ, ಯು.ಸಂಗೀತಾ, ಸುಮನಾ ಇತರರಿದ್ದರು.
Published on

ಹೊಸನಗರ: ತಾಲೂಕಿನಲ್ಲಿ ಶೀಘ್ರದಲ್ಲಿ ಸುಸಜ್ಜಿತ ಗುರುಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಲೂಕಿನ ನಗರ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಹೊಸನಗರ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ಬಾಲಕ-ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿರುವ ಗುರುಭವನ ಶಿಥಿಲಗೊಂಡಿದ್ದು, ನೂತನ ಗುರುಭವನ ನಿರ್ಮಾಣಕ್ಕೆ ಶಾಸಕರ ಹಾಗೂ ಸರ್ಕಾರದ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.

ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ರಿಪ್ಪನಪೇಟೆ ಕಾಲೇಜು ಪ್ರಾಚಾರ್ಯ ವಾಸುದೇವ್ ಅವರನ್ನು ಸನ್ಮಾನಿಸಲಾಯಿತು. ನಗರ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ, ಕಾರ್ಯದರ್ಶಿ ರವಿಕುಮಾರ , ಮೂಡುಗೊಪ್ಪ ಗ್ರಾಪಂ ಅಧ್ಯಕ್ಷೆ ಯು.ಸಂಗೀತಾ, ಉಪಾಧ್ಯಕ್ಷೆ ಸುಮನಾ, ಕೊಡಚಾದ್ರಿ ಪದವಿ ಕಾಲೇಜು ಸಮಿತಿ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಪಪಂ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಗೀತಾ ಬಾಲಚಂದ್ರ, ಮಹಮದ್ ನಜಹತ್, ಸ್ವಾಮಿರಾವ್, ಗಣೇಶ, ಬಾಲಚಂದ್ರ, ಪಂಡರಿನಾಥ್, ಎಚ್.ಎಚ್.ಶೇಷಾದ್ರಿ, ಡಾ. ವೈ.ಕೃಷ್ಣಮೂರ್ತಿ, ರಮೇಶಕುಮಾರ್, ಎಂ.ವಿ.ಜಗನ್ನಾಥ್, ಎಸ್.ನರಸಿಂಹಮೂರ್ತಿ, ಶೇಷಾದ್ರಿ, ಕುಮಾರ್, ಕೆ.ಎಸ್.ಗಂಗಾಧರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net