'ಎಲ್ಲ ಧರ್ಮಗಳ ಸಹಕಾರದೊಂದಿಗೆ ನಿರ್ಮಾಣವಾಗುತ್ತಿದೆ ಶ್ರೀರಾಮಮಂದಿರ...'

Om Birla
Published on

ನವದೆಹಲಿ: ಶ್ರೀರಾಮಮಂದಿರ ಭೂಮಿ ಪೂಜೆಗೆ ಸಂಪನ್ನವಾದ ಬೆನ್ನಲ್ಲೇ ಶ್ರೀರಾಮನ ಭಕ್ತರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಫೇಸ್​ಬುಕ್​​ನಲ್ಲಿ ಪೋಸ್ಟ್​ ಹಾಕಿದ ಅವರು, ಪ್ರಭು ಶ್ರೀರಾಮಚಂದ್ರ ಈ ದೇಶದ ಸಾಂಸ್ಕೃತಿಕ ಜಾಗೃತಿಯ ಸಂಕೇತ. ದೇಶಾದ್ಯಂತ ಎಲ್ಲ ಜನರಿಗೂ ಶ್ರೀರಾಮನಲ್ಲಿ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಎಲ್ಲ ಧರ್ಮ, ವರ್ಗಗಳ ಜನರ ಸಹಕಾರದೊಂದಿಗೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಆಗುತ್ತಿರುವುದು ಅತ್ಯಮತ ಸಂತೋಷದ ಸಂಗತಿ. ದೇಶದಲ್ಲಿ ಏಕತೆ ಮತ್ತು ಸಾಮರಸ್ಯವನ್ನು ಕಾಪಾಡುವಲ್ಲಿ ಖಂಡಿತ ಶ್ರೀರಾಮಮಂದಿರ ಮುಖ್ಯ ಪಾತ್ರ ವಹಿಸುತ್ತದೆ ಎಂದು ಓಂ ಬಿರ್ಲಾ ತಿಳಿಸಿದ್ದಾರೆ.

ಈ ದೇಶದ ಜನರು ಬಹು ಕಾಲದಿಂದಲೂ ಶುಭ ಸಮಾರಂಭಕ್ಕಾಗಿ ಕಾಯುತ್ತಿದ್ದರು. ರಾಮಮಂದಿರ ಭೂಮಿ ಪೂಜೆ ಇಡೀ ದೇಶಕ್ಕೆ ದೈವತ್ವವನ್ನು ಪಸರಿಸುತ್ತದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net