

* ಕಿರುವಾರ ಎಸ್. ಸುದರ್ಶನ್ ಕೋಲಾರ
ಕೋಲಾರ ನಗರಸಭೆ ಸುತ್ತಮುತ್ತ ಅನಽಕೃತ ಬಡಾವಣೆ ನಿರ್ಮಾಣವಾಗುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಬಡಾವಣೆ ನಿರ್ಮಾಣ ಮಾಡಬೇಕಾದರೆ ನಗರಾಭಿವವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕು. ಅದಕ್ಕೂ ಮೊದಲು ಜಿಲ್ಲಾಽಕಾರಿ ಕಚೇರಿಯಿಂದ ಭೂ ಪರಿವರ್ತನೆ ಮಾಡಿಸಿರಬೇಕು. ಇದಕ್ಕೆಲ್ಲ ಬಡಾವಣೆ ಮಾಲೀಕರು ಸರ್ಕಾರಕ್ಕೆ ಶುಲ್ಕ ಪಾವತಿ ಮಾಡಬೇಕಿದೆ.
ಆದರೆ, ಸಮಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆದುಕೊಳ್ಳದೆ ಕೆಲವರು ಕಂದಾಯ ಜಮೀನುಗಳನ್ನು ವಸತಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಡಾವಣೆಗಳನ್ನಾಗಿ ನಿರ್ಮಾಣ ಮಾಡುತ್ತಿದ್ದಾರೆ. ನಿಯಮ ಉಲ್ಲಂಘನೆ ಮಾಡಿ ಕಂದಾಯ ಜಮೀನುಗಳಲ್ಲಿ ಬಡಾವಣೆ ನಿರ್ಮಾಣ ಮಾಡುತ್ತಿದ್ದರೂ ಅಽಕಾರಿಗಳು ಜಾಣಮೌನ ತಾಳಿದ್ದಾರೆ.
ಬೆಂಗಳೂರು-ಚೆನ್ನೆ ರಾಷ್ಟ್ರೀಯ ಹೆದ್ದಾರಿ-75 ನಗರದಲ್ಲಿ ಹಾದು ಹೋಗಿದ್ದು, ಜಮೀನುಗಳ ಬೆಲೆಯು ಎಸ್‌ಆರ್ ದರಕ್ಕಿಂತ ಹೆಚ್ಚಿದೆ. ಒಂದು ಎಕರೆ ಏನಿಲ್ಲ ಅಂದರೂ 1 ಕೋಟಿ ರೂ.ಗೂ ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ. ರಿಯಲ್ ಎಸ್ಟೇಟ್ ಮಾಲೀಕರು ಬಡಾವಣೆಗಳನ್ನು ನಿರ್ಮಾಣ ಮಾಡುವ ಉದ್ದೇಶವೂ ಜಮೀನಿನ ಬೇಡಿಕೆ ಹೆಚ್ಚಿಸಿದೆ. ಇದರಿಂದಾಗಿ ಕೋಲಾರ ನಗರದ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯವಹಾರ ಬೀರುಸುಗೊಂಡಿದೆ. ಆದರೆ, ಇದರ ನಡುವೆ ಅನಽಕೃತ ಬಡಾವಣೆ ನಿರ್ಮಾಣವಾಗುತ್ತಿರುವುದು ಸುಳ್ಳಲ್ಲ.
ಎಲ್ಲೆಲ್ಲಿ ನಿರ್ಮಾಣ?
ಟೇಕಲ್ ರಸ್ತೆ, ಮಾಲೂರು ರಸ್ತೆ, ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ, ಗದ್ದೆಕಣ್ಣೂರು ರಸ್ತೆ, ಬಂಗಾರಪೇಟೆ ರಸ್ತೆ, ಶ್ರೀನಿವಾಸಪುರ ರಸ್ತೆಯ ನಗರ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಽಕೃತ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಇಲ್ಲಿ ನಿವೇಶನ ಖರೀದಿ ಮಾಡಿ ಮನೆ ನಿರ್ಮಿಸಿದವರಿಗೆ ಮುಂದಿನ ದಿನಗಳಲ್ಲಿ ಮೂಲ ಸೌಲಭ್ಯ ದೊರೆಯುವುದು ಕಷ್ಟವಾಗಿದೆ.
* ಸೌಲಭ್ಯ ಕಲ್ಪಿಸಲು ಪೀಕಲಾಟ..?
ಸಮಕ್ಷಮ ಪ್ರಾಧಿಕಾರದಿಂದ ಅನುಮತಿಯಿಲ್ಲದೆ ಬಡಾವಣೆ ನಿರ್ಮಾಣ ಮಾಡುತ್ತಾರೆ. ಇಲ್ಲಿ ಲಕ್ಷಾಂತರ ರೂ. ಪಾವತಿಸಿ ನಿವೇಶನ ಖರೀದಿ ಮಾಡಿ, ಮನೆ ನಿರ್ಮಾಣ ಮಾಡುತ್ತಾರೆ. ಆ ನಂತರ ಸದರಿ ಬಡಾವಣೆಗೆ ಸೌಲಭ್ಯಗಳನ್ನು ನಗರಸಭೆ ಕಲ್ಲಪಿಸಬೇಕೆ ಅಥವಾ ಗ್ರಾಮ ಪಂಚಾಯಿತಿಯೇ ಎಂಬ ಬಗ್ಗೆ ಪೀಕಲಾಟ ಶುರುವಾಗುತ್ತದೆ. ಏಕೆಂದರೆ ಬಡಾವಣೆ ನಿರ್ಮಾಣವು ಅನಧಿಕೃತ. ಆಗ ನೀರಿಗಾಗಿ ಖಾಸಗಿ ಟ್ಯಾಂಕರ್‌ಗಳ ಮೋರೆ ಹೋಗಬೇಕು. ವಿದ್ಯುತ್ ಸಂಪರ್ಕಕ್ಕೆ ಹೆಚ್ಚುವರಿ ಶುಲ್ಕ ಹೀಗೇ ಹತ್ತಾರು ಸಮಸ್ಯೆಗಳು ತೆರೆದುಕೊಳ್ಳುತ್ತವೆ.
* ಮಾಲೀಕನೊಂದಿಗೆ ಶಾಮೀಲು
ಕೋಲಾರ ನಗರ ಸಮೀಪದಲ್ಲಿ ಶಿವರಾಜ್ ಎಂಬವರು ನಗರದ 15ನೇ ವಾರ್ಡಿನ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರವಾದ ಕೋಲಾರ ನಗರಾಭಿವೃದ್ಧಿ (ಕೂಡಾ)ಯಿಂದ ಅನುಮತಿಯಿಲ್ಲದೆ, ಅನಽಕೃತ ಬಡಾವಣೆ ನಿರ್ಮಾಣ ಮಾಡಿದ್ದಾರೆ. ಜತೆಗೆ ಬಡಾವಣೆ ಅಭಿವೃದ್ಧಿಪಡಿಸಿಲ್ಲ. ಪಾರ್ಕ್, ಸಿಎ ಸೈಟ್ ಮೀಸಲಿಟ್ಟಿಲ್ಲ. ಹೀಗಿದ್ದರೂ ನಗರಸಭೆಯಲ್ಲಿ ಇ-ಸ್ವತ್ತು ನೀಡಿರುವುದು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಇದ್ದ ಪೌರಾಯುಕ್ತ ಶಿವಾನಂದ ಮತ್ತು ಇತರ ಅಽಕಾರಿಗಳು ವರ್ಗಾವಣೆಗೊಂಡ ದಿನ ಎರಡೇ ತಾಸಿನಲ್ಲಿ ಅನಧಿಕೃತವಾಗಿ ಇ-ಖಾತೆ ದಾಖಲೆ ನೀಡಿರುವುದು ಬೆಳಕಿಗೆ ಬಂದಿದೆ. ವರ್ಗಾವಣೆಗೊಂಡು ಬಿಡುಗಡೆಗೊಂಡು ಹೋಗುವ ಮುನ್ನಾದಿನ ಎಡವಟ್ಟು ಮಾಡಿಕೊಂಡಿದ್ದು, ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಾಲೀಕನೊಂದಿಗೆ ಅಧಿಕಾರಿಗಳು ಶಾಮೀಲಾಗಿ ಅಕ್ರಮ ಎಸಗಿದ್ದಾರೆ ಎಂದು ಕೆಲ ಸದಸ್ಯರು ಆರೋಪಿಸಿದ್ದಾರೆ.
* ಮಾಡಿರುವ ತಪ್ಪೇನು?
ಪೌರಾಯುಕ್ತ ಶಿವಾನಂದ, ಕಂದಾಯಾಧಿಕಾರಿ ಅನಿಲ್‌ಕುಮಾರ್, ಕಂದಾಯ ನಿರೀಕ್ಷಕ ಅಭಿಷೇಕ್ ಶಾಂತರಾಮ್ ಮಾನೆ, ಕರ ವಸೂಲಿಗಾರ ಬಿ.ಎಸ್.ಮಂಜುನಾಥ್, ಬಡಾವಣೆ ಮಾಲೀಕ ಶಿವರಾಜ್‌ರೊಂದಿಗೆ ಶಾಮೀಲಾಗಿ 16 ನಿವೇಶನಗಳಿಗೆ ಇ-ಖಾತೆ ನೀಡಿದ್ದಾರೆ. ಕಾನೂನು ಬಾಹಿರವಾಗಿ ಒಂದೇ ರಾತ್ರಿ ಸುಮಾರು ೮ ಗಂಟೆಯಲ್ಲಿ ಆನ್‌ಲೈನ್‌ನಲ್ಲಿ ಟಿಪ್ಪಣಿ ಮಾಡಿಸಿ, ಕೇವಲ ೨ ತಾಸಿನಲ್ಲಿ ತಂತ್ರಾAಶದಲ್ಲಿ ಅನುಮೋದಿಸಿದಾರೆ. ಅನಽಕೃತ ಬಡಾವಣೆಯಲ್ಲಿನ ನಿವೇಶನಗಳಿಗೆ ಇ-ಖಾತೆ ನೀಡಿರುವುದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ಆರೋಪಿಸಿರುವ ಸದಸ್ಯರು, ತಪ್ಪು ಎಸಗಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ಒಳಪಡಿಸಿ, ಕರ್ತವ್ಯದಿಂದ ಅಮಾನತು ಮಾಡಲು ಕ್ರಮಜರುಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ಕೋಟ್...
ಅನಧಿಕೃತ ನಿವೇಶನಗಳಿಗೆ ಇ-ಸ್ವತ್ತು ನೀಡಿರುವ ಬಗ್ಗೆ ಈಗಾಗಲೇ ಸಭೆಯಲ್ಲಿ ಧ್ವನಿ ಎತ್ತಿದಾಗ ಲೋಕಾಯುತ್ತ ತನಿಖೆಗೆ ಒಪ್ಪಿಸಲು ತೀರ್ಮಾನಿಸಲಾಯಿತು. ತನಿಖೆಗೆ ಒಪ್ಪಿಸಲು ಸರ್ಕಾರದ ಗಮನಕ್ಕೆ ತರಬೇಕು, ಯಾರ ಕೈವಾಡ ಇದೆ ಎಂಬುದು ಗೊತ್ತಿಲ್ಲ. ನಗರಸಭೆಯಿಂದ ದೂರು ನೀಡುವುದು ತಡವಾದರೆ ನಾನೇ ವೈಯಕ್ತಿವಾಗಿ ದೂರು ನೀಡುತ್ತೇನೆ.
| ಎಂ.ಸುರೇಶ್‌ಬಾಬು, ನಗರಸಭೆ ಸದಸ್ಯ