ಸೊರಬ ತಾಲೂಕಿನಲ್ಲಿ 239 ಬೂತ್ ರಚನೆ

kumar
ಸೊರಬದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿದರು. ಗುರುಕುಮಾರ ಪಾಟೀಲ್, ಎಂ.ಡಿ.ಉಮೇಶ್, ಮಲ್ಲಿಕಾರ್ಜುನ, ಕೃಷ್ಣಮೂರ್ತಿ ಇತರರಿದ್ದರು.
Published on

ಸೊರಬ: ಬೂತ್ ವ್ಯಾಪ್ತಿಯ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರ ಜತೆಗೂಡಿ ತಾಲೂಕಿನ 239 ಬೂತ್‌ನಲ್ಲಿ ಪ್ರಮುಖರು ಹಾಗೂ ಅಧ್ಯಕ್ಷರನ್ನೊಳಗೊಂಡ ಹೊಸ ಸಮಿತಿ ರಚಿಸಲಾಗಿದೆ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಗಳಿಗೆ ಭೇಟಿ ನೀಡಿ ಹೊಸ ಸಮಿತಿ ರಚಿಸುವಾಗ ಬೂತ್ ರಚನೆ ಜತೆಗೆ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಅಧಿಕಾರಿಗಳ ಜತೆಗೆ ಮಾತನಾಡಿ, ಸಮಸ್ಯೆ ಇತ್ಯರ್ಥಪಡಿಸಿದ್ದೇವೆ ಎಂದರು.

ಪ್ರಧಾನಮಂತ್ರಿ ಮನದ ಮಾತು ಕಾರ್ಯಕ್ರಮದ ಮಾದರಿಯಲ್ಲಿ ಬೂತ್ ವ್ಯಾಪ್ತಿಯಲ್ಲಿ ವಿವಿಧ ವಿಶೇಷ ಸ್ಥಳ, ವ್ಯಕ್ತಿ ಕುರಿತಾದ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ಮಾಹಿತಿಯನ್ನು ಪಕ್ಷದ ಸಂಘಟಕರಿಗೆ ತಿಳಿಸಲಾಗಿದೆ. ಚುನಾವಣೆ ಉದ್ದೇಶ ಹೊರತುಪಡಿಸಿ ಹೊಸ ಹೊಸ ಜ್ಞಾನ ನೀಡುವ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಗರಿಷ್ಠ ಮಾಹಿತಿ ಪಡೆಯಲು ತಿಳಿಸಲಾಗಿದೆ ಎಂದು ತಿಳಿಸಿದರು.

ಭಾಗ್ಯಗಳ ಹೆಸರಿನಲ್ಲಿ ರೈತರು, ಸಾಮಾನ್ಯ ಜನರನ್ನು ವಂಚಿಸಲಾಗುತ್ತಿದೆ. ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು. ಶಿಕ್ಷಣ ಮಂತ್ರಿ ಶಿಕ್ಷಕರ ನೇಮಕಾತಿ ಇಲ್ಲ ಎಂದು ಹೇಳಿದ್ದಾರೆ. ಕನ್ನಡ ಭಾಷೆ, ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಶಿಕ್ಷಕರನ್ನು ನೇಮಕ ಮಾಡಬೇಕು. ಒಂದು ಕಡೆ ಶರಾವತಿ ಸಂತ್ರಸ್ತರ ಉಳಿವಿನ ಬಗ್ಗೆ ಮಾತನಾಡುವ ಶಾಸಕರು ತಾಲೂಕಿನಲ್ಲಿ ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರ ನೋಟಿಸ್ ನೀಡುತ್ತಿದೆ. ಹಣ ಮಾಡುವ ಉದ್ದೇಶದಿಂದ ಬಗರ್‌ಹುಕುಂ ಸಮಿತಿ ಕಚೇರಿಯನ್ನು ತಾಲೂಕು ಕಚೇರಿಯಿಂದ ಶಾಸಕರ ಕಚೇರಿಗೆ ವರ್ಗಾಯಿಸಿಕೊಂಡು ಕಡತಗಳನ್ನು ಬೀದಿಪಾಲು ಮಾಡಲಾಗುತ್ತಿದೆ ಎಂದು ದೂರಿದರು.

ಮುಖಂಡರಾದ ಗುರುಕುಮಾರ ಪಾಟೀಲ್, ಎಂ.ಡಿ.ಉಮೇಶ್, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಕೃಷ್ಣಮೂರ್ತಿ, ಗುಡ್ಡಪ್ಪ, ಡಿ.ಶಿವಯೋಗಿ, ಗುರುಮೂರ್ತಿ ಹಿರೇಶಕುನ, ಅಶೋಕ್ ಶೇಟ್, ಅರುಣಗೌಡ, ಸುರೇಶ್, ಚಂದ್ರಪ್ಪ, ರಾಜು ಆನವಟ್ಟಿ, ಪ್ರವೀಣ್, ಕಿರಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net