ಸಂವಿಧಾನ ಎಲ್ಲ ವರ್ಗಕ್ಕೂ ನ್ಯಾಯ ಒದಗಿಸಿದೆ

16 nrp 4.
ಶೆಟ್ಟಿಕೊಪ್ಪದಲ್ಲಿ ನಡೆದ ನಾವುಭಾರತೀಯರು ಕಾರ್ಯಕ್ರಮದಲ್ಲಿ ಶೆಟ್ಟಿಕೊಪ್ಪ ಭದ್ರಾ ಕಾಲನಿ ಜುಮ್ಮಾ ಮಸೀದಿಧರ್ಮಗುರು ಸಿರಾಜುದ್ದಿನ್ ಸಖಾಫಿ ಮಾತನಾಡಿದರು. ಆನ್ೀ, ಸುನಿಲ್, ಸದಸ್ಯ ಎ.ಬಿ.ಮಂಜುನಾಥ್ ಇದ್ದರು.
Published on

ಎನ್.ಆರ್.ಪುರ: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ದೇಶದ ಎಲ್ಲ ವರ್ಗದ ಜನರಿಗೂ ನ್ಯಾಯ ಒದಗಿಸಿದೆ ಎಂದು ಶೆಟ್ಟಿಕೊಪ್ಪ ಭದ್ರಾ ಕಾಲನಿಯ ಜುಮ್ಮಾ ಮಸೀದಿ ಧರ್ಮಗುರು ಸಿರಾಜುದ್ದಿನ್ ಸಖಾಫಿ ಹೇಳಿದರು.
ಶೆಟ್ಟಿಕೊಪ್ಪದಲ್ಲಿ ಬುಧವಾರ ಎಸ್‌ಎಸ್‌ಎ್ ಹಾಗೂ ಎಸ್‌ವೈಎಸ್ ಆಶ್ರಯದಲ್ಲಿ ನಡೆದ ನಾವು ಭಾರತೀಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನ ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬಾಳುವಂತೆ ಮಾಡಿದೆ. ದೇಶದ ಸ್ವಾತಂತ್ರೃ ಸಂಗ್ರಾಮದಲ್ಲಿ ಅನೇಕ ಮುಸ್ಲಿಂ ಧರ್ಮಗುರುಗಳು, ಪ್ರಮುಖ ನಾಯಕರು ಭಾಗವಹಿಸಿ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಗಾಂಧೀಜಿ ಅವರ ಜತೆಗೆ ಅನೇಕ ಮಹನೀಯರು ಕೈ ಜೋಡಿಸಿದ್ದರು ಎಂದರು.
ಎಲ್ಲ ವರ್ಗದ, ಎಲ್ಲ ಧರ್ಮದವರ ಅಹಿಂಸಾ ಹೋರಾಟದ ಲದಿಂದ ಸ್ವಾತಂತ್ರೃ ಲಭಿಸಿದೆ ಆದರೆ ಈಗಲೂ ಕೂಡ ಧರ್ಮ ಧರ್ಮದ ನಡುವೆ ವೈಮನಸ್ಸು ತರುವ ಕೆಲಸಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ಸಮಾಜದಲ್ಲಿ ಶಾಂತಿ ಭಂಗ ಮಾಡಲು ಕೆಲ ಸಂಘಟನೆಗಳು ಷಡ್ಯಂತರ ಮಾಡುತ್ತಿರುವುದು ದುರಾದೃಷ್ಟಕರ. ಯಾವುದೇ ಕೃತ್ಯಗಳಿಗೂ ಕಿವಿಗೊಡುವ ಅಗತ್ಯವಿಲ್ಲ ಎಂದರು.
ಬಾಳೆಹೊನ್ನೂರಿನ ಮಂಝಲ್ ಅಕಾಡೆಮಿ ಜನರಲ್ ಮ್ಯಾನೇಜರ್ ಸವಾನ್ ಸಖಾಫಿ ಮಾತನಾಡಿ, ಬ್ರಿಟಿಷರ ಒಡೆದು ಆಳುವ ನೀತಿಯಿಂದ ಈ ದೇಶದಲ್ಲಿ ಅಧಿಕಾರ ಹಿಡಿದರು. ನಮ್ಮ ಒಗ್ಗಟ್ಟು ಮುರಿದು ಲಾಭ ಪಡೆದು ನಮ್ಮ ಮೇಲೆ ದಬ್ಬಾಳಿಕೆ ನಡೆಸಿದರು. ಎಲ್ಲ ನಾಯಕರ ಒಗ್ಗಟ್ಟಿನ ಲವಾಗಿ ಸ್ವಾತಂತ್ರೃ ಹೊಂದಲು ಸಾಧ್ಯವಾಯಿತು. ಸಂವಿಧಾನದ ಆಶಯದಂತೆ ಎಲ್ಲರೂ ಈ ದೇಶದಲ್ಲಿ ಬದುಕಬೇಕು. ಈ ದೇಶದಲ್ಲಿ ಹುಟ್ಟಿದ ನಾವು ಮಣ್ಣಿನ ಋಣ ತೀರಿಸಬೇಕು ಎಂದರು.
ಶೆಟ್ಟಿಕೊಪ್ಪ ಎಸ್‌ಎಸ್‌ಎ್ ಅಧ್ಯಕ್ಷ ಆನ್ೀ, ಆಲ್ ಖಲಮ್ ಎಂಬ ಮಾಸ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಶಬ್ಬೀರ್‌ಇಮಾಮಿ, ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನಿಲ್, ಸದಸ್ಯ ಎ.ಬಿ.ಮಂಜುನಾಥ್, ಮುಖಂಡರಾದ ಎಂ.ಮಹೇಶ್, ನಾಗರಾಜು, ಮಳಲಿ ಶ್ರೀನಿವಾಸ್, ಸುಲೇಮಾನ್, ಎ.ಸುಲೇಮಾನ್, ಸಾದತ್‌ಸಮೀರ್, ಅಬ್ದುಲ್‌ರಫೀಕ್, ದಾವೂದ್‌ಹಕೀಂ, ಅಬ್ದುಲ್‌ರೆಹಮನಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net